ಕೆಲ ವರ್ಷಗಳ ಬಳಿಕ ಬಿಜೆಪಿ ಮತ್ತೆ ಬಹುಮತದೊಂದಿಗೆ ಬೆಳ್ಳಾರೆ ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಭರ್ಜರಿ ವಿಜಯೋತ್ಸವ ನಡೆಯಿತು. ಪೇಟೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಯತೀಶ್ ಆರ್ವಾರ್, ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ , ಮುಖಂಡರುಗಳಾದ ಪ್ರದೀಪ್ ರೈ ಮನವಳಿಕೆ, ಅಜಿತ್ ಕಿಲಂಗೋಡಿ, ಅನೂಪ್ ಬಿಳಿಮಲೆ, ಸುಳ್ಯ ಬಿಜೆಪಿ ನಗರಾಧ್ಯಕ್ಷ ಕುಸುಮಾಧರ ಎ.ಟಿ., ಕಾರ್ಯದರ್ಶಿ ನಾರಾಯಣ ಎಸ್.ಎಮ್ ಉಪಸ್ಥಿತರಿದ್ದರು.