ಅಟಲ್ ಜಿ ಚಾರಿಟೇಬಲ್ ಟ್ರಸ್ಟ್(ರಿ.) ಸುಳ್ಯ ಹಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಅಟಲ್ ಜಿ ಯವರ ಜನ್ಮದಿನಾಚರಣೆಯನ್ನು ಪುಷ್ಪ ನಮನದೊಂದಿಗೆ ಸುಳ್ಯ ನರೇಂದ್ರ ವಿಹಾರದ, ಲಾಲ್ ಕೃಷ್ಣ ಸಭಾಂಗಣದಲ್ಲಿ ಇಂದು ಡಿ, 25 ರಂದು ಆಚರಿಸಲಾಯಿತು.
ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಸುಧಾಕರ ಕಾಮತ್ ಅಡ್ಕಾರು ರವರು ವಾಜಪೇಯಿಯವರ ಜೀವನ ಸಾಗಿಬಂದ ಬಗ್ಗೆ ವಿಶೇಷ ಮಾತುಗಳನ್ನಾಡಿದರು.
ಶಾಸಕರಾದ ಕು ಭಾಗೀರಥಿ ಮುರುಳ್ಯ ರವರು, ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿದರು. ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕಿಶೋರಿ ಶೇಟ್, ಟ್ರಸ್ಟ್ ನ ಕೋಶಾಧಿಕಾರಿ ಎ ವಿ ತೀರ್ಥರಾಮ, ಟ್ರಸ್ಟಿಗಳಾದ ವೆಂಕಟ್ ದಂಬೆಕೋಡಿ, ಎಸ್ ಎನ್ ಮನ್ಮಥ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಹಾಗೂ ಟ್ರಸ್ಟಿ ರಾಕೇಶ್ ರೈ ಕೆಡೆಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಮಾಜಿ ಪ್ರಧಾನ ಕಾರ್ಯದರ್ಶಿ ಜಯರಾಮ ರೈ ಜಾಲ್ಸೂರು ಮಂಡಲದ , ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಹಿತೈಷಿಗಳು ಪಾಲ್ಗೊಂಡಿದ್ದರು. ವಾಜಪೇಯಿಯವರ ಭಾವಚಿತ್ರಕ್ಕೆ ಸರ್ವರೂ ಪುಷ್ಪಾರ್ಚನೆ ಮಾಡಿದರು.ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೆನಾಲ ಸ್ವಾಗತಿಸಿ ನಿರೂಪಿಸಿದರು, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ವಂದಿಸಿದರು.
- Thursday
- January 9th, 2025