Ad Widget

ಕೊಯನಾಡು ಬಳಿ ಭೀಕರ ಅಪಘಾತ – ಸ್ಕೂಟಿಗೆ ಕಂಟೈನರ್ ಢಿಕ್ಕಿಯಾಗಿ ಸವಾರರಿಬ್ಬರು ಮೃತ್ಯು

ಸಂಪಾಜೆಯ ಚೆಡಾವು ಬಳಿ ಕಂಟೈನರ್ ಸ್ಕೂಟಿಗೆ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸಿದ್ಧಾಪುರದಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಸಂಪಾಜೆ ಕೊಯನಾಡಿನ ಚೆಡಾವು ಬಳಿ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟರೇ ಗಂಭೀರ ಗಾಯಗೊಂಡ...

ಕೋಟೇಶ್ವರ ದಿಂದ ಸುಳ್ಯದತ್ತ ಹೊರಟ ಬ್ರಹ್ಮರಥ : ನಾಳೆ ಸುಳ್ಯಕ್ಕೆ ಆಗಮನ

ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಸುಳ್ಯ ಚೆನ್ನಕೇಶವ ದೇವರಿಗೆ ಬ್ರಹ್ಮರಥ ಕೊಡುಗೆಯಾಗಿ ನೀಡುತ್ತಿದ್ದು,ಡಿ.23 ರಂದು ನೂತನ ಬ್ರಹ್ಮರಥಕ್ಕೆ ರಥಪೂಜೆ ನಡೆಯಿತು. ಇಂದು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕುಂಭಾಶಿಯಿಂದ ಬ್ರಹ್ಮರಥ ಸುಳ್ಯದತ್ತ ಹೊರಟಿದೆ. ಇಂದು ಸಂಜೆ ಪುತ್ತೂರು ತಲುಪಲಿರುವ ಬ್ರಹ್ಮರಥ, ನಾಳೆ ಮಧ್ಯಾಹ್ನ ದ ವೇಳೆಗೆ ಜಾಲ್ಸೂರು ತಲುಪಲಿದೆ. ಅಲ್ಲಿಂದ ವಾಹನ...
Ad Widget

ಬಜಪ್ಪಿಲ ಶ್ರೀ ಇರುವೆರ್ ಉಳ್ಳಾಕುಲು ಧೂಮಾವತಿ ಹಾಗೂ ಉಪದೈವಗಳ ಕ್ಷೇತ್ರದ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಂಪನ್ನ

ಸುಳ್ಯ ಸೀಮೆಯ ಬಜಪ್ಪಿಲ ಶ್ರೀ ಇರುವೆರ್ ಉಳ್ಳಾಕುಲು ಧೂಮಾವತಿ ಹಾಗೂ ಉಪದೈವಗಳ ಕ್ಷೇತ್ರವು ಜೀರ್ಣೋದ್ಧಾರಗೊಂಡು ದ. 22 ರಂದು ಬೆಳಗ್ಗೆ 10-23 ರ ಕುಂಭ ಲಗ್ನದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶಾಭಿಷೇಕವು ಕುಂಟಾರು ವೇ.ಮೂ. ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಜಪ್ಪಿಲ ಕ್ಷೇತ್ರ ವ್ಯಾಪ್ತಿಯ ಹಾಗೂ ತೊಡಿಕಾನ ಸೀಮೆಯ ಸಾವಿರಾರು...

ಡಿ.23 ರಿಂದ “ನೂರು ಜನ್ಮಕೂ” ಧಾರಾವಾಹಿ ಆರಂಭ

ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿ.23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಈ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ. ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ...

ಕುಕ್ಕೇಟಿ ಜತ್ತಪ್ಪ ನಿಧನ

ಸುಳ್ಯ : ಮಡಿಕೇರಿ ತಾಲೂಕು ಎಂ. ಚೆಂಬು ಗ್ರಾಮದ ಕುಕ್ಕೇಟಿ ಜತ್ತಪ್ಪ ಗೌಡ ಭಾನುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 68 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಪುಷ್ಪಾವತಿ ಮಕ್ಕಳಾದ ವನಿತಾ ಪ್ರಸಾದ್, ಕಿಶೋರ್, ಭವಾನಿಶಂಕರ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ – ಕಸ್ತೂರಿ ರಂಗನ್ ವರದಿ ವರದಿ ಸಂಪೂರ್ಣವಾಗಿ ತಿರಸ್ಕಾರ

ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರಕಾರ ನಿವಾರಣೆ ಮಾಡಿದೆ. ಕಸ್ತೂರಿ ರಂಗನ್ ವರಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಶತಮಾನಗಳಿಂದ ಇಲ್ಲಿ ಜನರು ವಾಸಿಸುತ್ತಿದ್ದಾರೆ, ಮತ್ತು ಅರಣ್ಯದಂಚಿನ ಜನರೇ ಅರಣ್ಯ ರಕ್ಷಿಸುತ್ತಿದ್ದಾರೆ‌ ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಯೋಜನೆಗಳಿವೆ. ಜನರ, ಜನಪ್ರತಿನಿಧಿಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ...

ಜೆಸಿಐ ವಲಯ ಸಂಯೋಜಕರಾಗಿ ಜೇಸಿ ಗುರುಪ್ರಸಾದ್ ನಾಯಕ್ ಆಯ್ಕೆ

ಪ್ರತಿಷ್ಠಿತ ಜೆಸಿಐ ಭಾರತದ ವಲಯ 15 ರ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ 23.12.24 ರಂದು ಕುಂದಾಪುರದ ತೆಕ್ಕಟ್ಟೆ ಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಲಯ 15ರ ಸಮುದಾಯ ಅಭಿವೃದ್ಧಿ ವಿಭಾಗದಲ್ಲಿ ಗೋ ಗ್ರೀನ್ ನ ವಿಭಾಗದ ವಲಯ ಸಂಯೋಜಕರಾಗಿ ಜೆಸಿ ಜೆಎಫ್ಎಂ ಗುರುಪ್ರಸಾದ್ ನಾಯಕ್...

ರೋಟರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹನಿಹನಿ ನೀರಿಗೂ ಹಾಹಾಕಾರ – ರೋಟರಿ ಅಧ್ಯಕ್ಷರಿಂದ ಸ್ಪಷ್ಟನೆ

ಸುಳ್ಯ : ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕಾರ್ಯ ನಡೆಯುತ್ತಿದ್ದು ರಥಬೀದಿಯು ಧೂಳುಮಯವಾಗಿ ಅಮರ ಸುದ್ದಿ ವರದಿ ಬೆನ್ನಲ್ಲೇ ಎಚ್ಚೆತ್ತ ಆಡಳಿತವು ತಕ್ಷಣ ಸ್ಪಂದನೆ ನೀಡಿ ಇಂಟರ್ ಲಾಕ್ ಅಳವಡಿಕೆ ಮತ್ತು ನೀರು ಹಾಯಿಸುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೆ ಇದೀಗ ಆಲೆಟ್ಟಿ ಮಿತ್ತೂರಿನ ರೋಟರಿ ಶಾಲೆಯಲ್ಲಿ ಹನಿಹನಿ ನೀರಿಗೂ ಕೊರತೆಯಾಗಿದ್ದು...

ಮಹಾವಿಷ್ಣು ಸ್ರ್ತೀ ಶಕ್ತಿ ಗೊಂಚಲು ಸಭೆಯಲ್ಲಿ ಮಂಡೆಕೋಲು ಗ್ರಂಥಾಲಯದ ವತಿಯಿಂದ ಡಿಜಿಟಲ್ ಸಾಕ್ಷರತಾ ತರಬೇತಿ ಮತ್ತು ಮಾಹಿತಿ ಸಂಗ್ರಹ ಕಾರ್ಯಗಾರ

ಮಹಾವಿಷ್ಣು ಸ್ರ್ತೀ ಶಕ್ತಿ ಗೊಂಚಲು ಸಭೆಯಲ್ಲಿ ಮಂಡೆಕೋಲು ಗ್ರಂಥಾಲಯದ ವತಿಯಿಂದ ಡಿಜಿಟಲ್ ಸಾಕ್ಷರತಾ ತರಬೇತಿ ಮತ್ತು ಮಾಹಿತಿ ಸಂಗ್ರಹ ಕಾರ್ಯಗಾರವು ಮಂಡೆಕೋಲಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ. ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷರಾದ ಸರೋಜಿನಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ,ಕಾರ್ಯದರ್ಶಿ ರೇಷ್ಮಾ, ಅಂಗನವಾಡಿ ಕಾರ್ಯಕರ್ತೆ ರಾಜೀವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು,...
error: Content is protected !!