ಕೃಷಿ ಇಲಾಖೆ ಸುಳ್ಯ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಕೃಷಿಕ ಸಮಾಜ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ರೈತ ದಿನಾಚರಣೆ, ರೈತರಿಗೆ ಮಾಹಿತಿ ಕಾರ್ಯಕ್ರಮ ಹಾಗೂ ಕೆ.ವಿ.ಕೆ ಮಂಗಳೂರುರವರ ವತಿಯಿಂದ ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಡಿ.23 ರಂದು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ದೇರಣ್ಣ ಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ರೈತ ಉತ್ಪಾದಕರ ಸಂಘದ ಅಧ್ಯಕ್ಷ ವೀರಪ್ಪ ಗೌಡ, ಕೃಷಿ ಇಲಾಖೆಯ ಸುಹಾನಾ ಮತ್ತಿತರರು ವೇದಿಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕರಾದ ಕೆ.ಸುಧಾಕರ ಪ್ರಭು, ಹರಿಪ್ರಸಾದ್, ಎ.ಟಿ. ಕುಸುಮಾಧರ, ಎ.ಶರತ್ ಕುಮಾರ್, ಎಸ್.ಎನ್. ಮನ್ಮಥ, ಚಂದ್ರ ಕೋಲ್ಚಾರ್, ಎ.ಉಮನಾಥ, ಶ್ಯಾಮ್ ಪ್ರಸಾದ್, ನಾರಾಯಣ ಗೌಡ, ನವೀನ್ ಕೆ.ಬಿ., ಕರುಣಾಕರ ಎ.ಎಸ್. ರುಕ್ಮಯ್ಯ ಗೌಡ, ಕುಮಾರಸ್ವಾಮಿ, ಅಣ್ಣಾಜೀ ಗೌಡ, ಕೆ.ಎಸ್.ಮಹೇಶ್ ಕುಮಾರ್ ರನ್ನು ಗೌರವಿಸಲಾಯಿತು.