ಸೋಮಶೇಖರ ಕೊಯಿಂಗಾಜೆ ನೇತ್ರತ್ವದ ಸಹಕಾರಿ ಅಭಿವೃದ್ಧಿ ರಂಗದ 9 ಮಂದಿ ಅಭ್ಯರ್ಥಿ ಗೆಲುವು ಸಾಧಿಸುವುದರ ಮೂಲಕ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದ ಚುಕ್ಕಾಣಿಯನ್ನು ಮತ್ತೆ ಹಿಡಿದಿದ್ದಾರೆ.
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಒಟ್ಟು 27 ಮಂದಿ ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಒಟ್ಟು 770 ಮತಗಳ ಪೈಕಿ 724 ಮತ ಚಲಾವಣೆಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದಿಂದ 9 ಮಂದಿ, ಬಿಜೆಪಿ ಬೆಂಬಲಿತ ಸಮನ್ವಯ ಸಹಕಾರಿ ಬಳಗದಿಂದ ಇಬ್ಬರು ಮತ್ತು ಒಬ್ಬರು ಸ್ವತಂತ್ರ ಅಭ್ಯರ್ಥಿ ವಿಜಯಿಯಾಗಿದ್ದಾರೆ.
ಸಾಮಾನ್ಯ 6 ಸ್ಥಾನಗಳಿಗೆ ಸ್ಪರ್ಧಿಸಿದ್ದ ಸಹಕಾರಿ ಅಭಿವೃದ್ಧಿ ರಂಗದಿಂದ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಜೋನಿ ಕೆ.ಪಿ.,ಜ್ಞಾನ ಶೀಲನ್, ಸಮನ್ವಯ ಸಹಕಾರಿ ಬಳಗದ ಗಣಪತಿ ಭಟ್ ಹಾಗೂ ಸ್ವತಂತ್ರ ಅಭ್ಯರ್ಥಿ ಜಿ ಕೆ ಹಮೀದ್ ವಿಜಯಿಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಅಬೂಸಾಲಿ ಪಿ.ಕೆ., ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಜಗದೀಶ ರೈ, ಕೆ.ಆರ್., ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಯಮುನಾ ಬಿ.ಎಸ್., ಪ್ರಮೀಳಾ ಪೆಲ್ತಡ್ಕ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರಿ ಅಭಿವೃದ್ಧಿ ರಂಗದಿಂದ ಉಷಾ ರಾಮ ನಾಯ್ಕ,ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸಮನ್ವಯ ಸಹಕಾರಿ ಬಳಗದ ಜಗದೀಶ ಜಿ.ವಿ. ಜಯಗಳಿಸಿದ್ದಾರೆ.