ಸುಳ್ಯ : ಸುಳ್ಯ ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿಯ ಧೂಳಿನಿಂದ ಅಡಕತ್ತರಿಗೆ ಸಿಲುಕಿದ ನ.ಪಂ , ಧೂಳುಮಯವಾದ ರಥಬೀದಿ ವ್ಯಾಪರಸ್ಥರಿಂದ ರಸ್ತೆ ತಡೆಗೆ ಚಿಂತನೆ ? ಎಂಬ ತಲೆಬರಹದೊಂದಿಗೆ ಅಮರ ಸುದ್ದಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ನ.ಪಂ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದೀಗ ರಸ್ತೆಯ ಧೂಳಿನ ಸಮಸ್ಯೆಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಕೆಲಸ ಕಾರ್ಯಗಳನ್ನು ಆರಂಭಿಸಿದ್ದು ಹಳೆಯ ಇಂಟರ್ ಲಾಕ್ ಅಳವಡಿಕೆ ಕೆಲಸ ಪ್ರಾಂರಂಭವಾಗಿದ್ದು ವ್ಯಾಪಾರೋದ್ದಮಿಗಳು ಇದೀಗ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
- Wednesday
- January 8th, 2025