ನಿಷ್ಠೆ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ಸಾಧ್ಯ ಡಾ. ಹರೀಶ್ ಎಂ.ಆರ್.
ನಿರ್ದಿಷ್ಟ ಗುರಿಯೆಡೆಗೆ ಸಾಗಿದರೆ ಯಶಸ್ಸು ಸಾಧ್ಯ : ಡಾ. ಕೆ.ವಿ. ಚಿದಾನಂದ
ಇಂದಿನ ಕಾಲದಲ್ಲಿ ಹಲವು ಅವಕಾಶಗಳಿವೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಶ್ರಮವಹಿಸಿ ಮುನ್ನಡಿಯಿಟ್ಟರೆ ಸಫಲತೆ ಪಡೆಯಲು ಸಾಧ್ಯ. ಒಂದು ಕಾಲದಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿ ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣ ದೊರೆಯಬೇಕೆನ್ನುವ ದೂರದೃಷ್ಟಿತ್ವವನ್ನು ಹೊಂದಿದ್ದ ಡಾ. ಕುರುಂಜಿ ವೆಂಕಟ್ರಮಣ ಗೌಡರು ನೆಹರು ಮೆಮೋರಿಯಲ್ ಕಾಲೇಜನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು. ಈಗೀಗ ಎಂ.ಬಿ.ಬಿ.ಎಸ್. ವೈದ್ಯರಿಗಿಂತ ಬಿ.ಎ.ಎಂ.ಎಸ್ ವೈದ್ಯರ ಸಂಖ್ಯೆ ಏರಿಕೆಯಾಗಿದೆ. ಪೋಷಕರ ಉತ್ತಮ ಮಾರ್ಗದರ್ಶನ ನೀಡಿದಾಗ ವೈದ್ಯರು ಉತ್ತಮ ವೈದ್ಯರಾಗುವುದಕ್ಕೆ ಸಾಧ್ಯ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು. ಅವರು ಡಿ. 21ರಂದು ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಮತ್ತು ಆಸ್ಪತ್ರೆಯಲ್ಲಿ ನಡೆದ ಪದವಿ ಪ್ರದಾನ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಷ್ಠೆ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ಲಭ್ಯ – ಡಾ. ಹರೀಶ್ ಎಂ.ಆರ್.
ನಾವು ನಮ್ಮ ಜೀವನದಲ್ಲಿ 3 ವ್ಯಕ್ತಿಗಳನ್ನು ಮರೆಯಬಾರದು. ಜನ್ಮಕೊಟ್ಟ ತಂದೆ, ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ದೇವರು. ಡಾ. ಕುರುಂಜಿ ವೆಂಕಟ್ರಮಣ ಗೌಡರ ದೂರದೃಷ್ಟಿತ್ವದಿಂದ 1996ರಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿ, ಬಳಿಕ ಡಾ. ಚಿದಾನಂದರು ಸಂಸ್ಥೆಯನ್ನು ಬೆಳೆಸಿಕೊಂಡು ಹೋಗಿರುವುದರಿಂದ ಇವತ್ತು ನೀವೆಲ್ಲಾ ಪದವೀಧರರಾಗಲು ಸಾಧ್ಯವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕಮಗಳೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡೀನ್ ಮತ್ತು ಡೈರೆಕ್ಟರ್ ಆಗಿರುವ ಡಾ. ಹರೀಶ್ ಎಂ.ಆರ್ ಹೇಳಿದರು.
ಎ.ಒ.ಎಲ್.ಇ ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ, ಎನ್.ಎಂ.ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಿಥಾಲಿ ಪಿ. ರೈ ಅತಿಥಿಗಳಾಗಿ ಭಾಗವಹಿಸಿದ್ದರು. ಎ.ಒ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭ ಚಿದಾನಂದ, ಕೌನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಜ್ಯುವೇಶನ್ ಕೋ ಆರ್ಡಿನೆಟರ್ ಡಾ. ವಿಜಯಲಕ್ಷ್ಮಿ ಪಿ. ಬಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ. ವಂದಿಸಿದರು. ಯಶಸ್ವಿನಿ ಎಂ ಮತ್ತು ಲಕ್ಷ್ಮೀ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಡಾ. ಅವಿನಾಶ್ ಮಿಥಾಲಿ ಪಿ.ರೈಯವರನ್ನು, ಡಾ. ನಿಲೋಫರ್ ಡಾ. ಹರೀಶ್ ರನ್ನು ಪರಿಚಯಿಸಿದರು.
ಅಕಾಡೆಮಿಕ್ ಕೋ ಆರ್ಡಿನೆಟರ್ ಡಾ. ಕವಿತಾ ಬಿ.ಯಂ, ಶಲ್ಯತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಹರ್ಷವರ್ಧನ್ ಕೆ, ಪ್ರಸೂತಿ ತಂತ್ರ ಸ್ತ್ರೀ ರೋಗ ವಿಭಾಗ ಮುಖ್ಯಸ್ಥರಾದ
ಡಾ. ಅಶೋಕ್ ಕೆ, ದ್ರವ್ಯಗುಣ ವಿಭಾಗ
ಮುಖ್ಯಸ್ಥರಾದ ಡಾ. ರಾಜಶೇಖರ್ ಎನ್, ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಭಾಗ್ಯೇಶ್ ಕೆ, ಕ್ರೀಯ ಶರೀರ ವಿಭಾಗ ಮುಖ್ಯಸ್ಥೆ ಡಾ. ಪ್ರತೀಮಾ ಗುಪ್ತ, ರೋಗನಿದನ ವಿಭಾಗ
ಮುಖ್ಯಸ್ಥೆ ಡಾ. ಭಾರತಿ ಎ.ಪಿ, ರಚನಾ ಶರೀರ ವಿಭಾಗ ಮುಖ್ಯಸ್ಥರಾದ ಡಾ. ವೇಣುಗೋಪಾಲ ಭಟ್, ರಷಶಾಸ್ತ್ರ ಭೈಷಜ್ಯ ಕಲ್ಪನಾ ವಿಭಾಗ ಮುಖ್ಯಸ್ಥರಾದ
ಡಾ. ಪುರುಷೋತ್ತಮ ಕೆ.ಜಿ, ಶಲಾಕ್ಯತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಹರಿಪ್ರಸಾದ್ ಶೆಟ್ಟಿ
ಅಗದತಂತ್ರ ವಿಭಾಗ ಮುಖ್ಯಸ್ಥರಾದ
ಡಾ. ಅವಿನಾಶ್ ಕೆ.ವಿ, ಪಂಚಕರ್ಮ ವಿಭಾಗ
ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ನಿಲಿಮಾ ಮತ್ತು ತಂಡ ಆಶಯಗೀತೆ ಹಾಡಿದರು. ಪದವಿ ಪಡೆದ ವಿದ್ಯಾರ್ಥಿಗಳು, ಪೋಷಕರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಸಿಬ್ಬಂದಿಗಳು ಸಹಕರಿಸಿದರು