ಪೇರಾಲು ಬಜಪ್ಪಿಲ ಶ್ರೀ ಇರುವೆರ್ ಉಳ್ಳಾಕುಲು ಧೂಮಾವತಿ ಪರಿವಾರ ದೈವಸ್ಥಾನಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ದೊರೆತಿದ್ದು, ಇಂದು ಬೆಳಗ್ಗೆ ಹಸಿರುವಾಣಿ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಣೆಗೊಂಡಿತು. ಪೇರಾಲು ಶ್ರೀರಾಮ ಭಜನಾ ಮಂದಿರದ ಬಳಿಯಿಂದ ಆರಂಭಗೊಂಡ ಹಸಿರುವಾಣಿ ಮೆರವಣಿಗೆ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹೇಮಂತ್ ಕುಮಾರ್ ಗೌಡರಮನೆ ಚಾಲನೆ ನೀಡಿದರು. ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಪೇರಾಲು ಹದಿನಾರು ಸೇರಿದಂತೆ ಊರ, ಪರವೂರ ಭಕ್ತರು ಮೆರವಣಿಯಲ್ಲಿದ್ದರು. ನೂರಾರು ವಾಹನಗಳು ಮೆರವಣಿಗೆಯಲ್ಲಿ ಸಾಗಿದವು.
ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಉಗ್ರಾಣ ತುಂಬಿಸಿದ ಬಳಿಕ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಇಂದು ಸಂಜೆ ತಂತ್ರಿಗಳ ಆಗಮನದ ಬಳಿಕ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪುಣ್ಯಾಹಾಂತ ಕಾರ್ಯಕ್ರಮ ನಡೆಯಲಿದೆ. ರಾತ್ರಿ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಶಾಖಾಮಠ ಧರ್ಮಪಾಲನಾಥ ಸ್ವಾಮೀಜಿಗಳು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕೇಸರ ಹೇಮಂತ್‌ಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ಡಾ. ಹರಪ್ರಸಾದ್, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್‌ಕುಮಾರ್ ಉಳುವಾರು, ಉಳ್ಳಾಕುಲು ದೈವಸ್ಥಾನ, ಮೇನಾಲ ಇದರ ಮೊಕ್ತೇಸರ ಗುಡ್ಡಪ್ಪ ರೈ ಮೇನಾಲ, ಶ್ರೀಪಾದ ಕನ್ಸಲ್‌ಟೆನ್ಸಿ ಇದರ ಸಿವಿಲ್ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸಲಿದ್ದಾರೆ. ಬಜಪ್ಪಿಲ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
ನಾಳೆ ಡಿ. 22ರಂದು ಬೆಳಿಗ್ಗೆ ಗಣಪತಿಹೋಮ, ಬ್ರಹ್ಮಕಲಶಪೂಜೆ, ಬೆಳಿಗ್ಗೆ 10.23 ರ ಕುಂಭ ಲಗ್ನದ ಸುಮೂಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ನಂತರ ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ ಹಾಗೂ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ ವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಕಮಿಟಿ ಬಿ ಇದರ ಚಯರ್‌ಮೆನ್ ಡಾ. ಕೆ. ವಿ. ರೇಣುಕಾಪ್ರಸಾದ್, ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಮೊಕ್ತೇಸರ ಮುದ್ದಪ್ಪ ಗೌಡ ಕುಡೆಂಬಿ, ಅಜ್ಜಾವರದ ಮಹಿಷಮರ್ಧಿನಿ ದೇವಸ್ಥಾನದ ಧರ್ಮದರ್ಶಿ ಬಯಂಬು ಭಾಸ್ಕರ ರಾವ್, ಕಾನತ್ತಿಲ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಹೇಮನಾಥ್ ಕೆ. ವಿ., ಅಂಬ್ರೋಟಿ ಹದಿನಾರು ಊರ ಗೌಡ ಲಕ್ಷ್ಮಣ ಗೌಡ ಕುಕ್ಕೇಟಿ, ಅತ್ಯಾಡಿ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕಯ್ಯ ಮಾಸ್ತರ್, ನಾರಾಲು ಉಳ್ಳಾಕುಲು ಚಾವಡಿ ಮೋನಪ್ಪ ಗೌಡ ನಾರಾಲು, ಮುಳ್ಯ ಹತ್ತೊಕ್ಕಲಿನ ಮುಖ್ಯಸ್ಥ ಹೊನ್ನಪ್ಪ ಗೌಡ ದೊಡ್ಡ ಮನೆ, ಕುಕ್ಕಂದೂರು ಕಿನ್ನಿಮಾನಿ ಪೂಮಾನಿ ದೈವಸ್ಥಾನದ ಮೊಕ್ತೇಸರ ಎನ್. ಎಸ್. ಬಾಲಕೃಷ್ಣ ಗೌಡ ನಡುಬೆಟ್ಟು, ಸುಳ್ಯದ ಪನ್ನೆಬೀಡು ಶ್ರೀ ಭಗವತೀ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಸುಳ್ಯದ ಕಲ್ಕುಡ ದೈವಸ್ಥಾನದ ಉಮೇಶ್ ಪಿ.ಕೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಬಜಪ್ಪಿಲ ಕ್ಷೇತ್ರದ ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಬಾಳೆಕೋಡಿ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ : ಡಿ. 21 ಶನಿವಾರ ಸಂಜೆ ಗಂಟೆ 4-00ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಸೌರಭ, ರಾತ್ರಿ ಗಂಟೆ 9-00ರಿಂದ ಡ್ಯಾನ್ಸ್ ಬೀಟ್ಸ್ ಜೀವನ್ ಟಿ. ಎನ್. ಬೆಳ್ಳಾರೆ ಇವರ ನಿರ್ದೇಶನ ತಂಡದಿಂದ “ನೃತ್ಯ ಸಂಭ್ರಮ” ಪ್ರದರ್ಶನಗೊಳ್ಳಲಿದೆ. ಡಿ.22 ರಂದು ಆದಿತ್ಯವಾರ ಸಂಜೆ ಗಂಟೆ 4-00ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಸೌರಭ, ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ರಾತ್ರಿ ಗಂಟೆ 9-00ರಿಂದ ತುಳು ಹಾಸ್ಯಮಯ ನಾಟಕ “ಅಮ್ಮೆರ್” ಪ್ರದರ್ಶನಗೊಳ್ಳಲಿದೆ