ಮಿತ್ರವೃಂದ ಪೈಲಾರು(ರಿ.), ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.), ಶೌರ್ಯ ಯುವತಿ ಮಂಡಲ(ರಿ.)ಪೈಲಾರು ಇದರ ಜಂಟಿ ಆಶ್ರಯದಲ್ಲಿ ಪೈಲಾರು ಸಮಸ್ತ ಜನರ ಸಹಯೋಗದೊಂದಿಗೆ “ನಮ್ಮ ಊರು ನಮ್ಮ ರಸ್ತೆ”
ಶ್ರಮದಾನ ಕಾರ್ಯಕ್ರಮ ಡಿ.15ರಂದು ನಡೆಯಿತು. ಪೈಲಾರಿನಿಂದ ಕುಕ್ಕುಜಡ್ಕ ತನಕ ರಸ್ತೆಯ ಬದಿ ಇರುವ ಗಿಡ ಮತ್ತು ಪೊದೆಗಳನ್ನು ತೆಗೆದು ರಸ್ತೆಯನ್ನು ಸ್ವಚ್ಛಗೊಳಿಸುವ ಮತ್ತು ರಸ್ತೆಯ ಗುಂಡಿಗಳಿಗೆ ಕಲ್ಲು ಹಾಕುವ ಮೂಲಕ ಪ್ರಯಾಣಿಕರಿಗೆ ಅನುಕೂಲಕರವಾದ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ “ನಮ್ಮ ಊರು ನಮ್ಮ ರಸ್ತೆ” ಕಾರ್ಯಕ್ರಮ ಆಯೋಜಿಸಿದ್ದು, ಪೈಲಾರಿನಿಂದ ಪಡ್ಪು ತನಕ ಶ್ರಮದಾನ ಮಾಡಲಾಯಿತು. ಈ ಶ್ರಮದಾನದಲ್ಲಿ ಮಿತ್ರವೃಂದ, ಫ್ರೆಂಡ್ಸ್ ಕ್ಲಬ್, ಶೌರ್ಯ ಯುವತಿ ಮಂಡಲ ಮತ್ತು ಊರಿನವರು ಸಹಕರಿಸಿದರು. ಉಳಿದಿರುವ ಕೆಲಸವನ್ನು ಮುಂದಿನ ದಿನದಲ್ಲಿ ಮಾಡಲಾಗುವುದು. ಆಟೋ ಚಾಲಕರಾದ ಸುರೇಶ್ ಮೂಕಮಲೆ ತಂಪು ಪಾನೀಯ, ಶಿವರಾಜ್ ಕುಕ್ಕುಜಡ್ಕ ಐಸ್ ಕ್ರೀಂ ನೀಡಿ ಸಹಕರಿಸಿದರು. ದಿನಸಿ ಸಾಮಾಗ್ರಿಗಳ ಖರೀದಿಗೆ ನಾರಾಯಣ ಮೂಕಮಲೆ & ಕೃಷ್ಣಪ್ಪ ಗೌಡ ಕೋಡ್ತುಗುಳಿ ಸಹಕರಿಸಿದರು. ಅಡುಗೆ ವ್ಯವಸ್ಥೆಯಲ್ಲಿ ಕುಶಾಲಪ್ಪ ಮಾಡಬಾಕಿಲು ಮತ್ತು ನಾರಾಯಣ ಕೋಡ್ತುಗುಳಿ ಕುಟುಂಬದವರು ಸಹಕರಿಸಿದರು.
- Wednesday
- January 8th, 2025