- Wednesday
- April 2nd, 2025

ಅರಂತೋಡಿನ ಅಡಿಮಾರಡ್ಕ ಎಂಬಲ್ಲಿ ಅಟೋ ರಿಕ್ಷಾ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ರಿಕ್ಷಾ ಚಾಲಕ ವಿಶ್ವನಾಥ ಗೌಡ ಉಕ್ರಾಜೆ ( ಕರ್ಕುಂಜ) ಅಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಮಿಕ ಮುಖಂಡ ಕೆ. ಪಿ. ಜಾನಿ ಅವರ ಪತ್ನಿ ಶ್ರೀಮತಿ ಸಿನಿ ಜಾನ್ ರವರು ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಆರಿಕೋಡಿ ಚಾಮುಂಡೇಶ್ವರಿ ಧರ್ಮದರ್ಶಿಗೂ ನೂತನ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ, ಭಕ್ತಿಯಿಂದ ಆಮಂತ್ರಣವಿತ್ತು ಆಶೀರ್ವಾದ ಬೇಡಿದ ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿಯವರು ಆಶೀರ್ವಾದ ಪಡೆದರು. ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ಧ ಭಕ್ತಿ ಕೇಂದ್ರವಾಗಿರುವ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ. ಕೆ.ವಿ ಚಿದಾನಂದ ಮತ್ತು ಮನೆಯವರು ನೂತನ ಬ್ರಹ್ಮರಥ ಮತ್ತು ಪಲ್ಲಕ್ಕಿಯನ್ನು ಸಮರ್ಪಿಸಲಿದ್ದಾರೆ. ಡಿ.25ರಂದು ಸುಳ್ಯದಲ್ಲಿ...

ಸುಳ್ಯ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಡಿ. 17 ರಂದು ನಡೆಯಿತು. ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ಹಾಗೂ ಶಾಲಾ ಧ್ವಜಾರೋಹಣವನ್ನು ಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ'ಸೋಜ ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಬಿ.ಕೆ ಮಾಧವ,ಕಬಡ್ಡಿ ಹಾಗೂ ಖೋ ಖೋ ಎನ್. ಐ. ಎಸ್ ತರಬೇತಿದಾರರು, ಕ್ರೀಡಾ...

ಆಯುಧ ಪರವಾನಿಗೆ ನವೀಕರಣ ದಿನಾಂಕ 31-12-2024 ರಂದು ಮುಕ್ತಾಯಗೊಳ್ಳುವ ಪರವಾನಿಗೆದಾರರು 2024 ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ತಾಲೂಕು ದಂಢನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯನ್ನು ಹೊಂದಿರುವ ಪರವಾನಿಗೆದಾರರು ದಿನಾಂಕ : 31.12.2024 ರಂದು ನವೀಕರಣ ಮುಕ್ತಾಯಗೊಳ್ಳುವವರು ದಿನಾಂಕ : 31-12-2024 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ದಿನಾಂಕ :...

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸುಳ್ಯ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಕ್ರೈಂ ಜಾಗೃತಿ ಮತ್ತು ವಾಹನ ಚಾಲನೆ ಕುರಿತು ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು. ಸೈಬರ್ ಕ್ರೈ೦ ಜಾಗೃತಿ ಕುರಿತು ಎ.ಎಸ್ ಐಉದಯಕುಮಾರ್ ಮಾಹಿತಿ ನೀಡಿದರು. ವಾಹನ ಚಾಲನೆ ಜಾಗೃತಿ ಕುರಿತು ಎ.ಎಸ್.ಐ ಸುರೇಶ್ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕ ಶಿವಪ್ರಕಾಶ...

ಸುಳ್ಯ: ಡಾ. ಕೆ.ವಿ ಚಿದಾನಂದ ಮತ್ತು ಮನೆಯವರಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಗೆ ಶ್ರೀಚೆನ್ನಕೇಶವ ದೇವಸ್ಥಾನದ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಹ್ವಾನ, ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದವನ್ನು ಕುರುಂಜಿ ಕುಟುಂಬವು ಪಡೆದುಕೊಂಡರು . ಸುಳ್ಯದ ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿರುವ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ...

ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಕೊಡಗು ಜಿಲ್ಲಾ ಘಟಕ, ಮಡಿಕೇರಿ ತಾಲೂಕು ಘಟಕ, ಸಂಪಾಜೆ ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 30/12/2024 ರಂದು ಪೂ.10.30ಕ್ಕೆ ಸಂಪಾಜೆ ನಾಡಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಹಲವು ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಕಂದಾಯ ಇಲಾಖೆ ಇದುವರೆಗೂ ಸೂಕ್ತ ಜಾಗ ನೀಡದೆ ವಂಚಿಸುತ್ತಿತ್ತು....

ಮಂಗಳೂರು: ನವದೆಹಲಿಯ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದ್ರಾಜೆ ಅವರಿಗೆ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ದುರ್ಗಾಕುಮಾರ್ ನಾಯರ್‌ಕೆರೆ...