
ಸುಳ್ಯ ತಾಲೂಕು ಮಟ್ಟದ ಪ.ಜಾತಿ ಮತ್ತು ಪ.ಪಂಗಡದವರ ಕುಂದುಕೊರತೆಗಳ ಸಭೆಯು ಸುಳ್ಯ ಠಾಣಾಧಿಕಾರಿ ಸಂತೋಷ್ ರವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು ಪ್ರಮುಖ ಕಾನೂನು ಸಲಹೆಗಳು ಮತ್ತು ಎಸ್ಸಿ ಎಸ್ಟಿ ಸಮುದಾಯದ ಪ್ರಮುಖರಿಗೆ ಕಾನೂನಿನ ಅರಿವು ಮೂಡಿಸುವ ಸಲುವಾಗಿ ನಾಯಕರು ಶ್ರಮ ವಹಿಸಬೇಕು ಎಂದು ತಿಳಿಸಿದರು. ಮುಂದೆ ಪ್ರತಿ ಗ್ರಾಮವಾರು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಮಾಹಿತಿ ನೀಡುವ ಮತ್ತು 94ಸಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳ ಮಾಹಿತಿ ಕೊರತೆ ಇದೆ ಆ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ಸಭೆಗೆ ಕರೆಸುವ ಕೆಲಸ ಆಗಬೇಕಿದೆ ಎಂದು ಆಗ್ರಹಿಸಿದರು. ಇದಕ್ಕೆ ಠಾಣಾಧಿಕಾರಿಗಳು ಒಪ್ಪಿಗೆ ಸೂಚಿಸಿ ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಅರಿವು ಮೂಡಿಸುವ ಕೆಲಸಗಳು ಮತ್ತು ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ನಂದರಾಜ್ ಸಂಕೇಶ್ , ಶಂಕರ್ ಪೆರಾಜೆ , ಚಂದ್ರಶೇಖರ ಪಲ್ಲತಡ್ಕ , ಹರೀಶ್ ಮೇನಾಲ , ಕೊರಗಪ್ಪ ಕೆ , ಗಣೇಶ್ , ಕರುಣಾಕರ ಪಲ್ಲತ್ತಡ್ಕ , ರಮೇಶ್ ದೊಡ್ಡೆರಿ , ಸತೀಶ್ ಬೂಡುಮಕ್ಕಿ , ಅಜ್ಜಾವರ ಬೀಟ್ ಪೋಲಿಸ್ ಮಹದೇವ್ ಪ್ರಸಾದ್ , ಸುಳ್ಯ ಠಾಣೆಯ ಎಸ್ ಬಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
