Ad Widget

ಕೊಡಗು ಗೌಡ ಹುತ್ತರಿ ಕಪ್ – 2024 ಮುಡಿಗೇರಿಸಿಕೊಂಡ ಪೆರಾಜೆಯ ಕುಂಬಳಚೇರಿ ಕುಟುಂಬ

ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಆಯೋಜಿಸಿದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬವಾರು ಹಗ್ಗ ಜಗ್ಗಾಟ ಪಂದ್ಯಾವಳಿಯ ಪ್ರಥಮ ವರ್ಷದ ಕೊಡಗು ಗೌಡ ಹುತ್ತರಿ ಕಪ್ – 2024 ಅನ್ನು ಪೆರಾಜೆಯ ಕುಂಬಳಚೇರಿ ಮನೆತನ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಕುಂಬಳಚೇರಿ ಕುಟುಂಬ ತಂಡವು ಎದುರಾಳಿ ಪರ್ಲಕೋಟಿ ಕುಟುಂಬವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಹಗ್ಗ ಜಗ್ಗಾಟದ ರನ್ನರ್ ಅಪ್ ಪ್ರಶಸ್ತಿಯನ್ನು ಪರ್ಲಕೋಟಿ ಕುಟುಂಬ ತಂಡವು ಪಡೆದು ಕೊಂಡರೆ ,
ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಪೆರಾಜೆಯ ನಿಡ್ಯಮಲೆ ಕುಟುಂಬ ಮತ್ತು ಮಜಿಕೋಡಿ ಕುಟುಂಬ ತಂಡ ಪಡೆದು ಕೊಂಡಿತು.
ಮಹಿಳೆಯರ ಕುಟುಂಬವಾರು ಹಗ್ಗಜಗ್ಗಾಟ ಪಂದ್ಯದಲ್ಲಿ ದಾಯನ ಕುಟುಂಬ ತಂಡ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಅಮೆಮನೆ ಕುಟುಂಬಸ್ಥರ ತಂಡ , ತೃತೀಯ ಹಾಗೂ ಚತುರ್ಥ ಕುದುಪಜೆ ಮತ್ತು ಪೊನ್ನೇಟಿ ಕುಟುಂಬ ತಂಡಗಳು ಪಡೆದುಕೊಂಡಿತು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!