- Wednesday
- December 18th, 2024
ಸೌದೆಗಾಗಿ ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಮಾವ ಹಾಗೂ ಸೊಸೆಯ ಮೇಲೆ ಕಾಡು ಹಂದಿ ದಾಳಿ ನಡೆಸಿದ ಘಟನೆ ಬಾಳುಗೋಡು ಗ್ರಾಮದ ಕೊತ್ನಡ್ಕ ಎಂಬಲ್ಲಿ ವರದಿಯಾಗಿದ್ದು, ಕೊತ್ನಡ್ಕದ ಬಾಬು(ಮಾವ) ಹಾಗೂ ಹರಿಣಾಕ್ಷಿ(ಸೊಸೆ) ಎಂಬುವವರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸೌದೆ ತರಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಕಾಡು ಹಂದಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.ಘಟನೆಯಲ್ಲಿ ಮಹಿಳೆಯ ತೊಡೆ...
https://youtu.be/Glt6qIcvuAM?si=PC9WP7Egr8tMj9AW ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಆಯೋಜಿಸಿದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬವಾರು ಹಗ್ಗ ಜಗ್ಗಾಟ ಪಂದ್ಯಾವಳಿಯ ಪ್ರಥಮ ವರ್ಷದ ಕೊಡಗು ಗೌಡ ಹುತ್ತರಿ ಕಪ್ - 2024 ಅನ್ನು ಪೆರಾಜೆಯ ಕುಂಬಳಚೇರಿ ಮನೆತನ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪುರುಷರ...
ಭಾಷೆ ಬೆಳವಣಿಗೆ ಮತ್ತು ವಿಸ್ತರಣೆಗೆ ಸಹಕರಿಸಿದ ವಿವಿಧ ಕ್ಷೇತ್ರದ 6 ಮಂದಿ ಸಾಧಕರಿಗೆ ಸನ್ಮಾನ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸ್ಥಾಪನಾ ದಿನದ ಅಂಗವಾಗಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ಆಶ್ರಯದಲ್ಲಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ, ತರುಣ ನಗರ ಘಟಕ ಮತ್ತು ಮಹಿಳಾ ಸಮಿತಿಯ ಸಹಕಾರದಲ್ಲಿ ಸುಳ್ಯದ...
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಅಕಾಡೆಮಿ ಸುಳ್ಯದ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ 'ಬಿ' ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಆಯ್ಕೆಯಾಗಿದ್ದಾರೆ.ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ಎರಡು ಅವಧಿಗೆ ಅವಿರೋಧವಾಗಿ ಮತ್ತು ಮೂರನೇ ಅವಧಿಗೆ ಬಹುಮತದಿಂದ ಚುನಾಯಿತರಾಗಿದ್ದ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು...
ದ. 16ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಬೆಳ್ಳಾರೆ ಜೇಸಿಐನ 2025ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ರೈ ಬೀಡು ಮತ್ತು ಕಾರ್ಯದರ್ಶಿಯಾಗಿ ಉಮೇಶ್ ಮಣಿಕ್ಕಾರ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದ. 16ರಂದು ಸಂಜೆ 6.30ಕ್ಕೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ಅಜಪಿಲ...
ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಆಶ್ರಯದಲ್ಲಿ ಬೆಳ್ಳಾರೆ ಸ್ನೇಹಾoಜಲಿ ಕುಣಿತ ಭಜನಾ ತಂಡದ 2 ನೇ ತಂಡದ ತರಬೇತಿ ಯು ದಿನಾಂಕ 15 ದಶoಬರ 2024 ಆದಿತ್ಯವಾರ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಂಗಣದಲ್ಲಿ ಪ್ರಾರಂಭಗೊಂಡಿತು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ದೀಪ ಪ್ರಜ್ವಲಿಸಿ ಶುಭಹಾರೈಸಿದರು, ಸ್ನೇಹಿತರ...
ಸುಳ್ಯ ತಾಲೂಕು ಮಟ್ಟದ ಪ.ಜಾತಿ ಮತ್ತು ಪ.ಪಂಗಡದವರ ಕುಂದುಕೊರತೆಗಳ ಸಭೆಯು ಸುಳ್ಯ ಠಾಣಾಧಿಕಾರಿ ಸಂತೋಷ್ ರವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು ಪ್ರಮುಖ ಕಾನೂನು ಸಲಹೆಗಳು ಮತ್ತು ಎಸ್ಸಿ ಎಸ್ಟಿ ಸಮುದಾಯದ ಪ್ರಮುಖರಿಗೆ ಕಾನೂನಿನ ಅರಿವು ಮೂಡಿಸುವ ಸಲುವಾಗಿ ನಾಯಕರು ಶ್ರಮ ವಹಿಸಬೇಕು ಎಂದು ತಿಳಿಸಿದರು. ಮುಂದೆ ಪ್ರತಿ ಗ್ರಾಮವಾರು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ...
ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳವು ಮಾಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಮರ್ಕಂಜ ಗ್ರಾಮದ ಮಿನುಂಗೂರು ದೇವಸ್ಥಾನ ಜೀರ್ಣೋದ್ದಾರ ಗೊಳ್ಳುತ್ತಿದ್ದು, ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಹೊರಗಿನ ಆವರಣದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸಲಾಗಿತ್ತು. ಕಳೆದ ರಾತ್ರಿ ಕಳ್ಳರು ದೇವಸ್ಥಾನಕ್ಕೆ ಬಂದು ಕಾಣಿಕೆ ಡಬ್ಬಿಯನ್ನು ಒಡೆದು ಹಣ ದೋಚಿದ್ದಾರೆನ್ನಲಾಗಿದೆ. ಇಂದು ಬೆಳಿಗ್ಗೆ...