Ad Widget

ಪೆರಾಜೆ : ಕೊಲೆ ಪ್ರಕರಣದ ಆರೋಪಿಗಳಿಗೆ  ಜೀವಾವಧಿ ಶಿಕ್ಷೆ

ಪೆರಾಜೆ ಗ್ರಾಮದಲ್ಲಿ ದಿನಾಂಕ 08-05-2020ರಂದು ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಿಬ್ಬರಿಗೆ ಮಡಿಕೇರಿಯ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

. . . . . . .

ದಿನಾಂಕ 08-05-2020ರಂದು ಪೆರಾಜೆ ಗ್ರಾಮದ  ಉತ್ತರಕುಮಾರ ಎಂಬಾತನೊಂದಿಗೆ  ತಾರೀಣಿ ಮತ್ತು ಆಕೆಯ ಅಕ್ಕನ ಮಗ ಧರಣಿಕುಮಾರ್ ಎಂಬಿಬ್ಬರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ   ಹಲ್ಲೆ ಮಾಡಿ ಕುತ್ತಿಗೆ,  ಕೈ, ತೊಡೆ ಹಾಗೂ ಶರೀರದ ಎಲ್ಲಾ ಭಾಗಗಳಿಗೆ ಕಡಿದು ಆತನನ್ನು ಕೊಲೆ ಮಾಡಿದ್ದಾಗಿ  ದೂರು ಸ್ವೀಕರಿಸಲಾಗಿತ್ತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ದಿನಾಂಕ 09-05-2020 ರಂದು ಆರೋಪಿಗಳಾದ ತಾರೀಣಿ ಮತ್ತು ಧರಣಿಕುಮಾರನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿಗಳಾದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮತ್ತು ಸಹಾಯಕ ತನಿಖಾಧಿಕಾರಿಗಳಾದ ಎ.ಎಸ್. ಐ. ಶ್ರೀಧರ್ ರವರು ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ದಿನಾಂಕ 14-07-2020 ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.  ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಡಿ.12 ರಂದು ಆರೋಪಿಗಳಾದ ತಾರೀಣಿ (46) ಮತ್ತು ಧರಣಿಕುಮಾರ್ (22) ಇವರಿಬ್ಬರು ಕೊಲೆ ಮಾಡಿದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. ಒಂದು ಲಕ್ಷ ದಂಡವನ್ನು ಹಾಗೂ ಸಾಕ್ಷವನ್ನು ನಾಶ ಪಡಿಸಿದ ಅಪರಾಧಕ್ಕಾಗಿ 3 ವರ್ಷ ಶಿಕ್ಷೆ ಮತ್ತು ತಲಾ ರೂ. 10000 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ್ ಅವರು ತೀರ್ಪು ನೀಡಿದ್ದಾರೆ. ಇಲಾಖೆಯ ಪರವಾಗಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ಅವರು ವಾದ ಮಂಡಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!