Ad Widget

ಡಿ.16 : ಕುಕ್ಕೆ ದೇವಳಕ್ಕೆ ನೂತನ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿಯ ಪಲ್ಲಕ್ಕಿಯನ್ನು ಸೇವಾ ರೂಪದಲ್ಲಿ ಬಾಗಲಕೋಟೆಯ ಉದ್ಯಮಿ ನಾಗರಾಜ್ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ ವೈ.ಎಸ್ ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸಮರ್ಪಣೆ ಮಾಡಲಿದ್ದಾರೆಸುಮಾರು 17.65 ಲಕ್ಷದಲ್ಲಿ ಬೆಳ್ಳಿಯ ಪಲ್ಲಕ್ಕಿ ರಚನೆಯಾಗಿದೆ. ಕಾರ್ಕಳದ ಬಜಗೋಳಿಯ ಸುಧಾಕರ ಡೋಂಗ್ರೆ ಮತ್ತು ಶಿಷ್ಯರು ನೂತನ ಪಲ್ಲಕ್ಕಿಯನ್ನು ನಿರ್ಮಿಸುತ್ತಿದ್ದಾರೆ. ಈಗ...

ಬೋರುಗುಡ್ಡೆ ರಸ್ತೆಯಲ್ಲಿ ಕಾರು ಪಲ್ಟಿ

ಸುಳ್ಯ ಆಲೆಟ್ಟಿ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿ ತಪ್ಪಿಸುವ ಸಲುವಾಗಿ ಕಾರನ್ನು ಚಲಾವಣೆ ಮಾಡುವಾಗ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Ad Widget

ಕಲ್ಮಡ್ಕ: ಜ್ವರದಿಂದ ಮಹಿಳೆ ಮೃತ್ಯು

ಬೆಳ್ಳಾರೆ ಶ್ರೀ ದುರ್ಗಾ ಜ್ಯುವೆಲ್ಲರಿ ಮಾಲಕ, ಕಲ್ಮಡ್ಕ ಗ್ರಾಮದ ಮಾಳಿಗೆ ನಾರಾಯಣ ಆಚಾರ್ಯ ರವರ ಪತ್ನಿ ಶ್ರೀಮತಿ ಹರಿಣಾಕ್ಷಿ ಯವರು ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.12 ರಂದು ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ,ಮೂವರು ಪುತ್ರಿಯರು, ಮನೆಯವರು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಡಿ. 16 : ಸೌರ ವಿದ್ಯುತ್ ಯೋಜನೆಗಳ ಕುರಿತು ಕಾರ್ಯಾಗಾರ,ಸ್ವ ಉದ್ಯೋಗ ಮಾಹಿತಿ ಹಾಗೂ ಪ್ರಧಾನಮಂತ್ರಿ ಸೂರ್ಯ ಘ‌ರ್ ಯೋಜನೆಯ ನೋಂದಣಿ ಕಾರ್ಯಕ್ರಮ

ಪ್ರಣವ ಚಾರಿಟೇಬಲ್ ಟ್ರಸ್ಟ್ ಮಂಗಳೂರು (ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಇದರ ಅಂಗ ಸಂಸ್ಥೆ) ಮತ್ತು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಸಹಯೋಗದೊಂದಿಗೆ ಸೆಸ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ಇದರ ವತಿಯಿಂದ ಡಿ. 16 ರಂದು ಬೆಳಗ್ಗೆ ಸುಳ್ಯದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ರೈತಾಪಿ ಜನರ ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಪ್ರಯೋಜನಕ್ಕಾಗಿ ಸೌರ...

ರಾಯಲ್ ಫ್ರೆಂಡ್ಸ್ ಗೂನಡ್ಕ ಮಹಾಸಭೆ : ಅಧ್ಯಕ್ಷರಾಗಿ ಸಾಜಿದ್ ಐ.ಜಿ. – ಪ್ರಧಾನ ಕಾರ್ಯದರ್ಶಿಯಾಗಿ ಜಾಬಿ ಎಂ.ಬಿ. ಆಯ್ಕೆ

ರಾಯಲ್ ಫ್ರೆಂಡ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ (ರಿ) ಇದರ ವಾರ್ಷಿಕ ಮಹಾ ಸಭೆಯು ಗೂನಡ್ಕದ ಕಛೇರಿಯಲ್ಲಿ ಅಧ್ಯಕ್ಷರಾದ ಸಾಜಿದ್ ಐ.ಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2024-25 ನೆಯ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಸಾಜಿದ್ ಐ. ಜಿಪ್ರಧಾನ ಕಾರ್ಯದರ್ಶಿಯಾಗಿ ಜಾಬಿ ಎಂ. ಬಿಕೋಶಾಧಿಕಾರಿಯಾಗಿ ಅಜರುದ್ದೀನ್ ಚೇರೂರುಉಪಾಧ್ಯಕ್ಷರಾಗಿ ಅಜೀಜ್ ಟಿ.ಬಿ ಕಾರ್ಯದರ್ಶಿಗಳಾಗಿಉಬೈಸ್...

ಸುಬ್ರಹ್ಮಣ್ಯ : ನೀರುಬಂಡಿ ಉತ್ಸವ ದೊಂದಿಗೆ ಕುಕ್ಕೆ ಜಾತ್ರೋತ್ಸವ ಸಂಪನ್ನ – ಸರ್ಪಸಂಸ್ಕಾರ ಸೇವೆ ಪ್ರಾರಂಭ

ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಡಿ.12 ಗುರುವಾರದಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ...

ಮೊಗ್ರ : ದೈವ ನರ್ತಕ ಗಿರಿಯಪ್ಪ ಅಜಿಲ ನಿಧನ

ಗುತ್ತಿಗಾರು ಗ್ರಾಮದ ಮೊಗ್ರ ನಿವಾಸಿ ಗಿರಿಯಪ್ಪ ಅಜಿಲರವರು ಹೃದಯಘಾತದಿಂದ ಡಿ. 12ರಂದು ರಾತ್ರಿ ನಿಧನರಾದರು. ಅವಿವಾಹಿತರಾಗಿದ್ದ ಅವರಿಗೆ 36 ವರ್ಷ ವಯಸ್ಸಾಗಿತ್ತು. ಆರೋಗ್ಯದಿಂದಿದ್ದ ಅವರು ರಾತ್ರಿ ಊಟ ಮುಗಿಸಿ ಮಲಗುವ ಹೊತ್ತಿಗೆ ಮನೆಯಲ್ಲಿ ಹೃದಯಘಾತವಾಯಿತೆನ್ನಲಾಗಿದೆ. ತಕ್ಷಣ ಅವರನ್ನು ಕಾಣಿಯೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೇ ಚಿಕಿತ್ಸೆ ಫಲಿಸದೇ ಮೃತಪಟ್ಟರೆಂದು ತಿಳಿದುಬಂದಿದೆ. ಮೊಗ್ರ ಶ್ರೀ ಕನ್ನಡ...

ಪೆರಾಜೆ : ಕೊಲೆ ಪ್ರಕರಣದ ಆರೋಪಿಗಳಿಗೆ  ಜೀವಾವಧಿ ಶಿಕ್ಷೆ

ಪೆರಾಜೆ ಗ್ರಾಮದಲ್ಲಿ ದಿನಾಂಕ 08-05-2020ರಂದು ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಿಬ್ಬರಿಗೆ ಮಡಿಕೇರಿಯ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ದಿನಾಂಕ 08-05-2020ರಂದು ಪೆರಾಜೆ ಗ್ರಾಮದ  ಉತ್ತರಕುಮಾರ ಎಂಬಾತನೊಂದಿಗೆ  ತಾರೀಣಿ ಮತ್ತು ಆಕೆಯ ಅಕ್ಕನ ಮಗ ಧರಣಿಕುಮಾರ್ ಎಂಬಿಬ್ಬರು ಜಗಳ ಮಾಡಿ...
error: Content is protected !!