2024-25ನೇ ಸಾಲಿನಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ವತಿಯಿಂದ 2024-25ನೇ ಸಾಲಿಗೆ 5 ವಾರದ ತಲಾ 20 ಕೋಳಿ ಮರಿಗಳನ್ನು ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 291 ಭೌತಿಕ ಗುರಿ ನಿಗದಿಪಡಿಸಲಾಗಿದೆ. ಪ.ಜಾತಿಗೆ 15, ಪ.ಪಂ.ಕ್ಕೆ 222 ಹಾಗೂ ಸಾಮಾನ್ಯ ವರ್ಗಕ್ಕೆ 54 ಮರಿಗಳನ್ನು ವಿತರಿಸುವ ಗುರಿ ಇದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 25 ರಂದು ಕೊನೆಯ ದಿನ.
ಸುಳ್ಯ ತಾಲೂಕಿಗೆ ಗುರಿ ಒಟ್ಟು 35 ಭೌತಿಕ ಗುರಿ ನಿಗದಿಪಡಿಸಲಾಗಿದೆ. ಪ.ಜಾತಿಯ 2, ಪ.ಪಂ.ಕ್ಕೆ 30 ಹಾಗೂ ಸಾಮಾನ್ಯ ವರ್ಗದ 3 ಫಲಾನುಭವಿಗಳಿಗೆ ತಲ 20 ಮರಿಗಳನ್ನು ವಿತರಿಸುವ ಗುರಿ ಇದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 25 ರಂದು ಕೊನೆಯ ದಿನ.
ಆಸಕ್ತ ಮತ್ತು ಬಿ.ಪಿ.ಎಲ್ ವರ್ಗದ ಅರ್ಹ ಗ್ರಾಮೀಣ ರೈತ ಮಹಿಳೆಯರು ಆಯಾ ತಾಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯ ಅಧಿಕಾರಿಗಳ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಅವಶ್ಯಕ ದಾಖಲಾಲೆಗಳನ್ನು ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.