ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರವೆಗೆ ಸರಿಯುತ್ತಿರುವ ಖಾದ್ಯಗಳ ಪಾಕ ಸ್ಪರ್ಧೆಯು ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕರ ಕಛೇರಿ ಮಂಗಳೂರು ಇವರ ನೇತೃತ್ವದಲ್ಲಿ ಲೋಕೋಪಯೋಗಿ ಕಟ್ಟಡ ಸಂಕೀರ್ಣ ಮಂಗಳೂರಿನಲ್ಲಿ ನಡೆಯಿತು. ದ.ಕ ಜಿಲ್ಲೆಯ ವಿವಿಧ ತಾಲೂಕು ಗಳಿಂದ ಸುಮಾರು 70ಕ್ಕು ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು ಸುಳ್ಯ ತಾಲೂಕನ್ನು ಅಜ್ಜಾವರ ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ ಪ್ರತಿನಿಧಿಸಿದ್ದು ಇದರಲ್ಲಿ ಸಿಹಿ ಖಾದ್ಯ ದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಬೆಂಗಳೂರು ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಗೊಂಡಿರುತ್ತಾರೆ. ಹಾಗೂ ಯುವತಿ ಮಂಡಲ ಉಪಾಧ್ಯಕ್ಷೆ ಮಾಲತಿ ಸೂರ್ಯ ಅವರು ಖಾರ ಖಾದ್ಯ ವಿಭಾಗದಲ್ಲಿ ಭಾಗವಹಿಸಿದ್ದರು.
- Wednesday
- December 11th, 2024