Ad Widget

ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ – ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ರಾಜ್ಯಮಟ್ಟಕ್ಕೆ ಆಯ್ಕೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರವೆಗೆ ಸರಿಯುತ್ತಿರುವ ಖಾದ್ಯಗಳ ಪಾಕ ಸ್ಪರ್ಧೆಯು ಕೃಷಿ ಇಲಾಖೆ, ಜಂಟಿ ಕೃಷಿ ನಿರ್ದೇಶಕರ ಕಛೇರಿ ಮಂಗಳೂರು ಇವರ ನೇತೃತ್ವದಲ್ಲಿ ಲೋಕೋಪಯೋಗಿ ಕಟ್ಟಡ ಸಂಕೀರ್ಣ ಮಂಗಳೂರಿನಲ್ಲಿ ನಡೆಯಿತು. ದ.ಕ ಜಿಲ್ಲೆಯ ವಿವಿಧ ತಾಲೂಕು ಗಳಿಂದ ಸುಮಾರು 70ಕ್ಕು ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದು ಸುಳ್ಯ ತಾಲೂಕನ್ನು ಅಜ್ಜಾವರ ಚೈತ್ರ...

ಅರಂತೋಡು :  ಅಕ್ರಮ ದನ ಸಾಗಾಟ – ಪೋಲಿಸರಿಗೊಪ್ಪಿಸಿದ ಭಜರಂಗದಳ

ಅರಂತೋಡು : ಪುತ್ತೂರು ಭಾಗದಿಂದ ಮಂಡ್ಯ ಮೈಸೂರು ಕಡೆಗೆ ಅಕ್ರಮವಾಗಿ ದನ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭಜರಂಗದಳವು ತಡೆಯೊಡ್ಡಿ ವಾಹನವನ್ನು ಇದೀಗ ಸುಳ್ಯ ಪೋಲಿಸರಿಗೆ ಒಪ್ಪಿಸಿದ ಘಟನೆ ಇದೀಗ ನಡೆದಿದೆ. ಎರಡು ವಾಹನಗಳಲ್ಲಿ 5 ಹೋರಿಗಳು ಹಾಗು 2 ಹಸುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ವಾಹನ ಚಾಲಕರು ಸೇರಿದಂತೆ ಮೂವರನ್ನು ಪೋಲಿಸರು...
Ad Widget

ಮುರೂರು : ಓಮಿನಿ ಕಾರು – ಲಾರಿ ಅಪಘಾತ : ಕರ್ಲಪ್ಪಾಡಿಯ ವ್ಯಕ್ತಿ ಮೃತ್ಯು

ಸುಳ್ಯ - ಕಾಸರಗೋಡು ರಸ್ತೆಯ ಕುಂಟಾರು - ಮುರೂರು ಮಧ್ಯೆ ಓಮಿನಿ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಅಜ್ಜಾವರ ಕರ್ಲಪ್ಪಾಡಿಯ ಮಹಮ್ಮದ್ ಕುಂಞಯವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಬದಿಯಡ್ಕಕ್ಕೆ ಮಗನನ್ನು ಬಿಟ್ಟು ಬರುತ್ತಿರುವಾಗ ಈ ಅಪಘಾತ ನಡೆದಿದೆ.

ಸುಳ್ಯ : ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ

ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್‌ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಡಿ.09 ರಂದು ಸಹಕಾರಿಯ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜನಾರ್ದನ ದೋಳ ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ನಿರ್ದೇಶಕರಾದ ಪ್ರಭಾಕರನ್ ನಾಯರ್, ಪ್ರಕಾಶ್...

ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ : ಚಪ್ಪರ ಮುಹೂರ್ತ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.16 ರಿಂದ 21 ರ ತನಕ‌ ನಡೆಯಲಿರುವ ಜಾತ್ರಾ ಮಹೋತ್ಸವ ಹಾಗೂ‌ ಬ್ರಹ್ಮರಥೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ಡಿ.10 ರಂದು ನಡೆಯಿತು. ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಕ್ಷೇತ್ರದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಪೆರುವಾಜೆ ಗ್ರಾ.ಪಂ....

ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ವಿಧಿವಶ. ನಾಳೆ ರಾಜ್ಯಾದ್ಯಂತ ಸರಕಾರಿ ರಜೆ ಘೋಷಣೆ

ರಾಜ್ಯದ ಮಾಜಿ ಮುಖ್ಯ ಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ (92) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರ ಗೌರವಾರ್ಥ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಮತ್ತು ನಾಳೆ ಸರಕಾರಿ ರಜೆಯನ್ನು ಸರಕಾರ ಘೋಷಣೆ ಮಾಡಿದೆ. ರಾಜ್ಯಾದ್ಯಂತ ಎಲ್ಲಾ ಸರಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.
error: Content is protected !!