
“ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್” ಕವಿಗಳಿಂದ ಸ್ಥಳದಲ್ಲಿಯೇ ದಾಖಲೆ ಬರಹ ಕಾರ್ಯಕ್ರಮದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಅವರು ಜಾನಪದ ಕಲೆಯಾದ ಯಕ್ಷಗಾನ ಶೀರ್ಷಿಕೆ ಯಡಿಯಲ್ಲಿ 10 ನಿಮಿಷ 20 ಸೆಕೆಂಡ್ ನಲ್ಲಿ ಬರೆದು ರೆಕಾರ್ಡ್ ದಾಖಲೆ ಬರೆದಿದ್ದಾರೆ. ರಾಜ್ಯ ಕರುನಾಡ ಹಣತೆ ಕವಿ ಬಳಗ (ರಿ) ಚಿತ್ರದುರ್ಗ ಆಯೋಜಿಸಿರುವ ಪ್ರಥಮ ಜಾನಪದ ವಾರ್ಷಿಕೋತ್ಸವ ಕಾರ್ಯಕ್ರಮ 2024 ಚಿತ್ರದುರ್ಗ ದಲ್ಲಿ ದೆಹಲಿಯ “ಕರ್ನಾಟಕ ಅಚಿವರ್ಸ್ ಬುಕ್ ಆಪ್ ರೆಕಾರ್ಡ್ ಸಂಸ್ಥೆ” ಯವರು ಭಾಗವಹಿಸಿ ದಾಖಲೆ ಬರೆದ ಇವರಿಗೆ ಪ್ರಮಾಣ ಪತ್ರದ ಜೊತೆಗೆ ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.
