
ಅಡ್ಪಂಗಾಯದ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆ ಬಿಡುಗಡೆ ಇಂದು ನಡೆಯಿತು. ಹಿರಿಯ ಗುರುಸ್ವಾಮಿಗಳಾದ ಶಿವಪ್ರಕಾಶ್ ಗುರುಸ್ವಾಮಿ ಅಡ್ಪಂಗಾಯ ಇವರು ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆ ಬಿಡುಗಡೆಗೊಳಿಸಿದರು.
ಪೆರುಮಾಳ್ ಲಕ್ಷ್ಮಣ ಇವರು ಸಾಹಿತ್ಯ ಬರೆದು ಬಾಲಚಂದ್ರ ಬಿ ಕಾಸರಗೋಡು ಹಾಗೂ ಪುಷ್ಪಾವತಿ ಡಿ ಇವರು ಹಾಡಿದ
ನೀನು ಹರಸದೆ ನನಗೆ ಬಾಳು ಎಲ್ಲಿದೆ ಹಾಗೂ ಸ್ವಾಮಿಯ ನೋಡಲು ಚಂದ ಎಂಬ ಎರಡು ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು
ಈ ವೇಳೆ ಶ್ರೀಮತಿ ಶೋಭಾ ರಾಮಚಂದ್ರ ಮೇನಾಲ, ಧನಲಕ್ಷ್ಮಿ ಸಂತೋಷ್ ಅಡ್ಪಂಗಾಯ, ಬಾಲಕೃಷ್ಣ ಮೇನಾಲ, ಸುಜಿ ಸುಳ್ಯ
ಶಾಂತರಾಮ ಕಣಿಲೆಗುಂಡಿ, ಸುಂದರ ಪಾಟಾಜಿ, ರೋಜಾ ಷಣ್ಮುಖ ಗುರುಸ್ವಾಮಿ ಶಿಷ್ಯ ವೃಂದ ಶಿವಮೊಗ್ಗ, ಮಂದಿರದ ಭಜನಾ ತರಬೇತಿದಾರರು ಹಾಗೂ ಮಿಥುನ, ಮಧುರ, ಅರ್ಜುನ, ಗೋಪಾಲ ಪೇರಾಲು ಉಪಸ್ಥಿತರಿದ್ದರು.ಊರ ಪರ ಊರ ಗಣ್ಯರು ಉಪಸ್ಥಿತರಿದ್ದರು.
