- Wednesday
- April 2nd, 2025

ಅಡ್ಪಂಗಾಯದ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆ ಬಿಡುಗಡೆ ಇಂದು ನಡೆಯಿತು. ಹಿರಿಯ ಗುರುಸ್ವಾಮಿಗಳಾದ ಶಿವಪ್ರಕಾಶ್ ಗುರುಸ್ವಾಮಿ ಅಡ್ಪಂಗಾಯ ಇವರು ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆ ಬಿಡುಗಡೆಗೊಳಿಸಿದರು.ಪೆರುಮಾಳ್ ಲಕ್ಷ್ಮಣ ಇವರು ಸಾಹಿತ್ಯ ಬರೆದು ಬಾಲಚಂದ್ರ ಬಿ ಕಾಸರಗೋಡು ಹಾಗೂ ಪುಷ್ಪಾವತಿ ಡಿ ಇವರು ಹಾಡಿದನೀನು ಹರಸದೆ ನನಗೆ ಬಾಳು ಎಲ್ಲಿದೆ ಹಾಗೂ ಸ್ವಾಮಿಯ ನೋಡಲು ಚಂದ ಎಂಬ...

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆಯು ದಿನಾಂಕ 08 ರಂದು ಸಮಿತಿಯ ಅಧ್ಯಕ್ಷ ರಾದ ಶ್ರೀಜಿತ್ ಅರಂತೋಡು ರವರ ಅಧ್ಯಕ್ಷತೆ ಯಲ್ಲಿ ರಬ್ಬರ್ ಉತ್ಪಾದಕರ ಸಂಘ ದ ಸಭಾಭವನ ಅರಂತೋಡಿನಲ್ಲಿ ನಡೆಯಿತು ಹಿರಿಯ ರಾದ ಜನಾರ್ಧನ. ಎ. ಎಂ, ಗೋವಿಂದ ಎ. ಕೆ ಮತ್ತು...
ಗೂನಡ್ಕ : ಬೈಕ್ ಸ್ಕಿಡ್ ಆಗಿ ಸವಾರನೋರ್ವ ಗಾಯಗೊಂಡ ಘಟನೆ ಇದೀಗ ಗೂನಡ್ಕದಲ್ಲಿ ಸಂಭವಿಸಿದೆ. ಗೂನಡ್ಕ ಶಾಲೆಯ ಎದುರುಗಡೆ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಾಯಗೊಂಡಿದ್ದು, ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಸುಳ್ಯದ ಜಾಲ್ಸೂರಿನಲ್ಲಿ ಕರ್ತವ್ಯ ನಿರತ ಫಾರೆಸ್ಟ್ ವಾಚರ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಡಿ.7ರಂದು ವರದಿಯಾಗಿದೆ. ಜಾಲ್ಸೂರಿನ ಗೇಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಚರ್ ಸದಾಶಿವ (50) ಎಂಬವರೇ ಮೃತಪಟ್ಟ ದುರ್ದೈವಿ. ಅಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋದರೂ ಫಲಕಾರಿಯಾಗಲಿಲ್ಲವೆನ್ನಲಾಗಿದೆ..

ಯುವಕ ಮಂಡಲ (ರಿ) ಕನಕಮಜಲು, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ (ಕಾವಾ) ಮೈಸೂರು ಆಶ್ರಯದಲ್ಲಿ ನಡೆದ ಸು-ಯೋಗ 2024 ನಿಸರ್ಗ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ಡಿ. 08 ರಂದು ಶ್ರೀ ಬಾಲ ನಿಲಯ ಮೂರ್ಜೆ ಕನಕಮಜಲು ನಡೆಯಿತು.ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಕು| ಭಾಗೀರಥಿ ಮುರುಳ್ಯ ಮಾನ್ಯ ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರ ವಹಿಸಿದರು. ಮುಖ್ಯ ಅಥಿತಿಗಳಾಗಿ...

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪದವಿ ವಿಭಾಗದ ಖೋಖೋ ಪಂದ್ಯಾಟದಲ್ಲಿ ಕು. ಅನ್ವಿತಾ ಬೊಮ್ಮೆಟ್ಟಿ ಆಯ್ಕೆಯಾಗಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಮಂಗಳೂರಿನ ಹಂಪನಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಈಕೆ ಕಲ್ಮಡ್ಕ ಗ್ರಾಮದ ಬಾಲಕೃಷ್ಣ ನಾಯ್ಕ ಬೊಮ್ಮೆಟ್ಟಿ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರಿ.