
ನಿಗೂಢವಾಗಿ ಕಣ್ಮರೆಯಾಗಿದ್ದ ಸೇವಾಜೆ ನಿವಾಸಿ ವೃದ್ಧ ಬೆಳ್ಯಪ್ಪ ಗೌಡ (85)ಅವರದೆನ್ನಲಾದ ಅಸ್ಥಿಪಂಜರ ಮನೆಯ ಸಮೀಪದ ರಬ್ಬರ್ ತೋಟದ ಬಳಿ ಪತ್ತೆಯಾಗಿದೆ. ಸೆ.9ರಂದು ಸೇವಾಜೆಯ ಬೆಳ್ಯಪ್ಪ ಗೌಡ ಎಂಬುವವರು ಮನೆಯಿಂದ ಹಠಾತ್ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ಊರವರು ಹುಡುಕಾಟ ನಡೆಸಿದ್ದರೂ ಅವರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಜ್ಯೋತಿಷ್ಯ ಮೊರೆ ಹೋಗಿದ್ದರೂ ಫಲಿತಾಂಶ ಶೂನ್ಯವಾಗಿತ್ತು. ಇದೀಗ ಎಲ್ಲರೂ ಹುಡುಕಾಡಿದ ಜಾಗದ ಸಮೀಪವೇ ಅಸ್ಥಿಪಂಜರ ಪತ್ತೆಯಾಗಿರುವುದು ಊರವರ ಅಚ್ಚರಿಗೆ ಕಾರಣವಾಗಿದೆ.
