ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನಡೆಯುತ್ತಿದೆ. ನ.27 ರಂದು ಕೊಪ್ಪರಿಗೆ ಏರುವುದರೊಂದಿಗೆ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡಿದ್ದು, ಇಂದು(ಡಿ.06) ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ ನಡೆಯಲಿದ್ದು, ನಾಳೆ(ಡಿ.07) ಪ್ರಾತಃಕಾಲ 6:57ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ “ಚಂಪಾಷಷ್ಠಿ ಮಹಾರಥೋತ್ಸವ” ವು ನಡೆಯಲಿದೆ.
ಡಿ.08 ರಂದು ಅವಭೃತೋತ್ಸವ, ನೌಕಾವಿಹಾರ ನಡೆಯಲಿದ್ದು, ಡಿ.12 ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- December 12th, 2024