Ad Widget

ಸುಳ್ಯ ಎನ್ನೆoಪಿಯುಸಿಯಲ್ಲಿ ವಾರ್ಷಿಕ ಕ್ರೀಡಾಕೂಟ

ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟ ಡಿ 6ರಂದು ನಡೆಯಿತು. ಧ್ವಜಾರೋಹಣವನ್ನು ಪ್ರಾoಶುಪಾಲರಾದ ಮಿಥಾಲಿ ಪಿ ರೈ ಅವರು ನೆರವೇರಿಸಿದರು.,ಪದವಿ ವಿಭಾಗದ ದೈ. ಶಿ ನಿರ್ದೇಶಕರಾದ ಲೆ ಸೀತಾರಾಮ ಎಂ ಡಿ, ಕ್ರೀಡಾ ಜ್ಯೋತಿ ಸ್ವೀಕರಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ಉಪಸ್ಥಿತರಿದ್ದರು.ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯ ದೈ ಶಿ...

ಕುಕ್ಕೆ ಸುಬ್ರಹ್ಮಣ್ಯ : ಇಂದು(ಡಿ.06) ರಾತ್ರಿ ಪಂಚಮಿ ರಥೋತ್ಸವ – ನಾಳೆ(ಡಿ.07) ಪ್ರಾತಃಕಾಲ 6:57ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ “ಚಂಪಾಷಷ್ಠಿ ಮಹಾರಥೋತ್ಸವ”

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನಡೆಯುತ್ತಿದೆ. ನ.27 ರಂದು ಕೊಪ್ಪರಿಗೆ ಏರುವುದರೊಂದಿಗೆ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡಿದ್ದು, ಇಂದು(ಡಿ.06) ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ ನಡೆಯಲಿದ್ದು, ನಾಳೆ(ಡಿ.07) ಪ್ರಾತಃಕಾಲ 6:57ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ “ಚಂಪಾಷಷ್ಠಿ ಮಹಾರಥೋತ್ಸವ”...
Ad Widget

ಹರೀಶ ಪಟ್ಟೆ ನಿಧನ

ಮರ್ಕಂಜ ಗ್ರಾಮದ ಪಟ್ಟೆ ಚಂದ್ರ ಪಾಟಾಳಿ ಎಂಬವರ ಪುತ್ರ ಹರೀಶ ಎಂಬವರು ನಿನ್ನೆ (ಡಿ.5) ನಿಧನರಾದರು. ಅವರಿಗೆ 37 ವರ್ಷ ವಯಸ್ಸಾಗಿತ್ತು. ಹರೀಶರವರು ಮುಂಡೋಡಿ ಶ್ರೀ ಶಿರಾಡಿ ಯಾನೆ ರಾಜನ್ ದೈವದ ಎಣ್ಣೆ ಹಿಡಿಯುವ ಸೇವೆ ಮಾಡುತ್ತಿದ್ದರು. ಹಾಗೂ ಸುಳ್ಯದಲ್ಲಿ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ತಂದೆ ಮತ್ತು ತಾಯಿ ದೇವಕಿಯವರನ್ನು ಅಗಲಿದ್ದಾರೆ.

ಭಾರತ ಸರ್ಕಾರದ ಗೃಹ ಸಚಿವಾಲಯದಿಂದ ಡಾ. ಮುರಲೀ ಮೋಹನ್ ಚೂಂತಾರು ಅವರಿಗೆ ಡಿಜಿ ಡಿಸ್ಕ್ ಪುರಸ್ಕಾರ

ಕಳೆದ ಹತ್ತು ವರ್ಷಗಳಿಂದ ದ ಕ ಜಿಲ್ಲಾ ಗ್ರಹ ರಕ್ಷಕ ದಳದಲ್ಲಿ ನೀಡಿದ ನ್ಯಾಯಸಮ್ಮತ, ನಿಷ್ಕಾಮ,ನಿಷ್ಕಳಂಕ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ,ದಿನಾಂಕ 06/12/2024 ನೆ ಶುಕ್ರವಾರದಂದು ಭಾರತ ಸರ್ಕಾರದ ಗೃಹ ಸಚಿವಾಲಯ, ನವದೆಹಲಿ ಇವರಿಂದ ನೀಡಲ್ಪಟ್ಟ ಡಿಜಿ ಡಿಸ್ಕ್ ಪುರಸ್ಕಾರವನ್ನು ಪೋಲಿಸ್ ಮಹಾನಿರ್ದೇಶಕರ ಕಚೇರಿ ಬೆಂಗಳೂರು ಇಲ್ಲಿ ನಡೆದ ಗೃಹರಕ್ಷಕ ದಳದ 62ನೆಯ ಉತ್ತಾನ ದಿನಾಚರಣೆಯಂದು...

ಡಿ.16 ರಿಂದ ಜ.14 : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆಯು ಡಿ.16 ರಿಂದ ಜ.14 ರವರೆಗೆ ನಡೆಯಲಿದೆ. ಧನುಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ರೂ.200 ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಂ ಪ್ರಸಾದ್ ರವರು ತಿಳಿಸಿದ್ದಾರೆ.

ಸೇವಾಜೆ : ನಾಪತ್ತೆಯಾಗಿದ್ದ ವೃದ್ಧನ ಅಸ್ಥಿಪಂಜರ ಪತ್ತೆ

ನಿಗೂಢವಾಗಿ ಕಣ್ಮರೆಯಾಗಿದ್ದ ಸೇವಾಜೆ ನಿವಾಸಿ ವೃದ್ಧ ಬೆಳ್ಯಪ್ಪ ಗೌಡ (85)ಅವರದೆನ್ನಲಾದ ಅಸ್ಥಿಪಂಜರ ಮನೆಯ ಸಮೀಪದ ರಬ್ಬರ್ ತೋಟದ ಬಳಿ ಪತ್ತೆಯಾಗಿದೆ. ಸೆ.9ರಂದು ಸೇವಾಜೆಯ ಬೆಳ್ಯಪ್ಪ ಗೌಡ ಎಂಬುವವರು ಮನೆಯಿಂದ ಹಠಾತ್ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ಊರವರು ಹುಡುಕಾಟ ನಡೆಸಿದ್ದರೂ ಅವರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಜ್ಯೋತಿಷ್ಯ ಮೊರೆ ಹೋಗಿದ್ದರೂ ಫಲಿತಾಂಶ ಶೂನ್ಯವಾಗಿತ್ತು. ಇದೀಗ ಎಲ್ಲರೂ...
error: Content is protected !!