
ಮಾಕಸ್ ಲೈಟ್, ಇನ್ಸೂರೆನ್ಸ್, ಮಾಕಸ್ ಪೈನಾನ್ಸಿಯಲ್, ಹಾಗೂ ಐಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿವರ್ಗದ ನೇತೃತ್ವದಲ್ಲಿ ಮಂಗಳೂರಿನ ಟ್ರಿನಿಟಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನ ಅಡ್ಕಾರ್ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಈಕೆ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ದಂಪತಿಗಳ ಪುತ್ರಿ. ಈಕೆ ಸೈಂಟ್ ಜೋಸೇಫ್ ಆಂಗ್ಲ ಮಾಧ್ಯಮ ಶಾಲೆ 6ನೇ ತರಗತಿ ವಿದ್ಯಾರ್ಥಿನಿ.
