Ad Widget

ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಉಪಸ್ಥಿತಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ

ಪಕ್ಷ ಸಂಘಟನೆಗಾಗಿ ಯಾರು ಕರೆದರು ಬರುವೆ , ಕೈ ಮುಷ್ಟಿ ಮಾದರಿಯಲ್ಲಿ ಎಲ್ಲರನ್ನು ಒಳಗೊಂಡು ಪಕ್ಷ ಸಂಘಟಿಸಬೇಕು ಭಂಡಾರಿ ಕಿವಿಮಾತು.

. . . . .

ಕಾರ್ಯಕರ್ತರ ಪರವಾಗಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ – ಎಂ ವೆಂಕಪ್ಪ ಗೌಡ

ಮೊದಲು ಪಕ್ಷದ ಒಳಗೆ ಸ್ವಚ್ಚಗೊಳಿಸಬೇಕು ಬಳಿಕ ಅಧಿಕಾರಿಗಳ ಬಳಿಗೆ ಹೋಗಬೇಕು – ಕಂಠಿ ಆಗ್ರಹ

ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಯವರ ಉಪಸ್ಥಿತಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ದ.4 ರಂದು ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.

ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ ಇವರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾತನಾಡುತ್ತಾ ಪಕ್ಷ ಸಂಘಟನೆಗಾಗಿ ಪಕ್ಷದ ಚಿಹ್ನೆ ಮಾದರಿಯಲ್ಲಿ ಎಲ್ಲಾ ಘಟಕಗಳ ನಾಯಕರು ಕಾರ್ಯಕರ್ತರು ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು, ಈ ದೃಷ್ಟಿಯಲ್ಲಿ ಕೆಲಸವನ್ನು ಮಾಡೋಣ ಎಂದು ಹೇಳಿದರು. ಅಲ್ಲದೇ ಯಾವುದೇ ಜವಾಬ್ದಾರಿ ಪಡೆದು ಬಳಿಕ ನಿಷ್ಕ್ರಿಯರಾದವರು ತಮಗೆ ಕೆಲಸ ಮಾಡಲು ಆಗಲ್ಲ ಎಂದು ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು. ನನ್ನ ಅನುದಾನದಲ್ಲಿ ಸುಳ್ಯ ಬ್ಲಾಕ್ ನಲ್ಲಿ ೪೫.೫ ಲಕ್ಷ ರೂಪಾಯಿಗಳ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗಿದೆ. ಅಲ್ಲದೇ ಯಾವುದೇ ಗ್ರಾ.ಪಂ ಸೋತ ಅಭ್ಯರ್ಥಿ ಅಥವಾ ಗೆದ್ದವರು ನೇರವಾಗಿ ನನಗೆ ಅರ್ಜಿಗಳನ್ನು ನೀಡಿದಲ್ಲಿ ನಾನು ನನಗೆ ಬರುವ ಅನುದಾನದಲ್ಲಿ ಒಂದಿಷ್ಟು ನೀಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಅಲ್ಲದೇ ಕೆಲವೊಂದು ಅರ್ಜಿಗಳನ್ನು ಅಯಾ ಇಲಾಖೆಯ ಸಚಿವರ ಮೂಲಕ ಅನುದಾನ ಒದಗಿಸುವ ಕೆಲಸಗಳನ್ನು ಮಾಡಿಸುತ್ತೇನೆ ಎಂದು ಹೇಳಿದರು.

ಕಾರ್ಯಕರ್ತರ ಪರವಾಗಿ ಎಂ ವೆಂಕಪ್ಪ ಗೌಡ ಮಾತನಾಡಿ ಇಲ್ಲಿ ಕಾರ್ಯಕರ್ತರ ಕೆಲಸಗಳು ಆಗುತ್ತಿಲ್ಲ, ಸರಕಾರ ಬಂದರೂ ಬಿಜೆಪಿ ಅಧಿಕಾರದಲ್ಲಿ ಇರುವ ಹಾಗೆ ಇದೆ. ಅಲ್ಲದೇ ದೇವಾಲಯಗಳ ನಾಮ ನಿರ್ದೇಶನ , ಸಹಕಾರಿ ಸಂಘಗಳ ನಾಮನಿರ್ದೇಶನ ನಡೆಯುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿಯರನ್ನು ನೋಡಿ ನಾವು ಕಲಿಯಬೇಕು ಎಂದು ಹೇಳಿದರು. ಅಲ್ಲದೇ ಅಧಿಕಾರಿಗಳು ನಮ್ಮ ಕೆಲಸವನ್ನೇ ಮಾಡುವುದಿಲ್ಲ, ಇನ್ನು ಕಾರ್ಯಕರ್ತರ ಕೆಲಸ ಮಾಡುವುದು ಎಲ್ಲಿ ಎಂದು ಪ್ರಶ್ನಿಸಿದರು. ಆಡಳಿತ ವರ್ಗದಲ್ಲಿ ಇರುವವರು ಸ್ವಲ್ಪ ಗಮನ ಹರಿಸಬೇಕಿದೆ ಎಂದು ಹೇಳಿದರು.

ನ.ಪಂ ಸದಸ್ಯ ಶರೀಫ್ ಕಂಠಿ ಮಾತನಾಡಿ ಅಧಿಕಾರಿಗಳ ವರ್ಗಾವಣೆಯನ್ನು ಕೆಲವರು ಮಾಡುತ್ತಾರೆ. ಆದರೆ ಅವರು ಬಂದ ಬಳಿಕ ಇಲ್ಲಿ ಮಾಡುವುದು ಏನು ಕಾಂಗ್ರೆಸ್ ಕಾರ್ಯಕರ್ತರ ಕೆಲಸಗಳು ಆಗುತ್ತಿಲ್ಲ. ಮೊದಲು ಪಕ್ಷದ ಒಳಗೆ ಪಾಠ ಮಾಡಬೇಕು, ಬಳಿಕ ಅಧಿಕಾರಿಗಳಿಗೆ ಬೋಧನೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಟೌನ್ ಹಾಲ್ ಅಭಿವೃದ್ಧಿ ಕುರಿತು ಪ್ರಶ್ನಿಸಿ ಅದಕ್ಕೆ ಅನುದಾನ ಮಂಜೂರು ಗೊಳಿಸುವಂತೆ ವಿನಂತಿಸಿದರು. ಜಿಲ್ಲಾ ಕೆಡಿಪಿ ಸದಸ್ಯೆ ಸುಜಯಕೃಷ್ಣ ಮಾತನಾಡಿ ಪ್ರತಿಷ್ಠಿತ ದೇವಾಲಯದಲ್ಲಿ ಬಿಜೆಪಿಗರಿಗೆ ವಸತಿ ವ್ಯವಸ್ಥೆ ನೀಡುತ್ತಾರೆ. ಆದರೆ ಕಾಂಗ್ರೆಸ್ ನ ನಾವುಗಳು ಕೇಳಿದರೆ ನೀಡುವುದಿಲ್ಲಾ ಎಂದು ಹೇಳಿದರು . ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.‌ ಸಭೆಯ ವೇದಿಕೆಯಲ್ಲಿ ಬ್ಲಾಕ್ ಕಾರ್ಯದರ್ಶಿ ಪಿ ಎಸ್ ಗಂಗಾಧರ , ಪ್ರಮುಖರಾದ ಸರಸ್ವತಿ ಕಾಮತ್ , ಧನಂಜಯ ಅಡ್ಪಂಗಾಯ , ಕೆ ಪಿ ಜಾನಿ , ಡಾ.ಬಿ.ರಘು , ಕೆ ಎಂ ಮುಸ್ತಫ , ಶಾಹುಲ್ ಹಮೀದ್ ಕುತ್ತಮೊಟ್ಟೆ , ಎಂ ವೆಂಕಪ್ಪ ಗೌಡ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಪಕ್ಷದ ಹಿರಿಯ ಕಿರಿಯ ನಾಯಕರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!