ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ನ.30ರಂದು ವಿದ್ಯಾರ್ಥಿಗಳಿಗೆ ಆಹಾರ ಮೇಳವನ್ನು ಏರ್ಪಡಿಸಲಾಯಿತು. ಆಹಾರ ಮೇಳದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ ‘ ಸೋಜ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶಶಿಧರ ಎಂ .ಜೆ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಪ್ರಬೋದ್ ಶೆಟ್ಟಿ, ಉಪಸ್ಥಿತರಿದ್ದು ಮಾತನಾಡಿದರು.
ಆಹಾರ ಮೇಳದಲ್ಲಿ 108 ವಿದ್ಯಾರ್ಥಿಗಳು ಸ್ಟಾಲು ನಿರ್ಮಿಸಿದ್ದರು. ಉತ್ತಮ ಸ್ಟಾಲುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಿಗ್ ಚೆಪ್ಸ್ ಹೋಟೆಲ್ ಮಾಲಕ ನಾಗೇಶ್ ಶೆಟ್ಟಿ , ಫುಡ್ ಸೈನ್ಸ್ ಪದವೀಧರೆ ಕು.ಕೀರ್ತನಾ, ಶ್ರೀಮತಿ ಶೀಬಾ ತೀರ್ಪುಗಾರರಾಗಿ ಸಹಕರಿಸಿದರು. ತೀರ್ಪುಗಾರರ ಪರಿಚಯವನ್ನು ಸವಿತಾ ಆಲೆಟ್ಟಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ, ಸಹ ಶಿಕ್ಷಕಿ ವಿದ್ಯಾಶ್ರೀ ವಂದಿಸಿದರು, ಸಹ ಶಿಕ್ಷಕಿಯರಾದ ಯಶ್ವಿತಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಉಷಾದೇವಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.