ಹಳಗೇಟು ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ದಲ್ಲಿ ಡಿಸೆಂಬರ್ 8 ರಂದು ಭಾನುವಾರ ಸಂಜೆ ಗಂಟೆ 5:45 ರಿಂದ ರಾತ್ರಿ 8:15ರ ವರೆಗೆ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಮತ್ತು ಮಹಾಬಲ ಲಲಿತಕಲಾ ಸಭಾ ಪುತ್ತೂರು ಇದರ ಸಹಯೋಗದಲ್ಲಿ ಶಾಸ್ತ್ರೀಯ ಸಂಗೀತ ಸಂಭ್ರಮ ನಡೆಯಲಿದೆ
ಪ್ರಸಿದ್ಧ ಪದ್ಮಭೂಷಣ ಪಂಡಿತ್ ವಿಶ್ವ ಮೋಹನ್ ಭಟ್ ರವರ ಪುತ್ರ ತಂತಿ ಸಾಮ್ರಾಟ್ ಪಂಡಿತ್ ಸಲೀಲ್ ವಿ ಭಟ್ ಇವರಿಂದ ಸಾತ್ವಿಕ ವೀಣಾ ವಾದನ ಕಾರ್ಯಕ್ರಮ ಮತ್ತು ಕಾರ್ಕಳದ ಸುರಮಣಿ ಮಹಾಲಕ್ಷ್ಮಿ ಶೆಣೈ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಹಿಮ್ಮೇಳದಲ್ಲಿ ತಬಲದಲ್ಲಿ ಹಿಮಾಂಶು ಮಹಂತ್ ವಡೋದರ ಮತ್ತು ಹಾರ್ಮೋನಿಯಂ ನಲ್ಲಿ ವಿಶ್ವನಾಥ್ ಭಟ್ ಎಣ್ಣೆಹೊಳೆ ಇವರು ಸಹಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗುವುದೆಂದು ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷರಾದ ಡಾ. ಜೀವನ್ ರಾಂ ತಿಳಿಸಿರುತ್ತಾರೆ.