ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ನವೆಂಬರ್ 29 ಮತ್ತು 30ರಂದು ಸಂಯುಕ್ತ ಕ್ರೀಡೋತ್ಸವ ನಡೆಯಿತು. ಗತಕಾಲದಲ್ಲಿ ಉತ್ತಮ ಕ್ರೀಡಾ ಪ್ರತಿಭೆ ರೂಪಿಸಿದ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕ್ರೀಡಾಪಟುಗಳು ರೂಪುಗೊಳ್ಳಲಿ ಎಂದು ಸುಧಾಕರ ರೈ ಬಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ಕ್ರೀಡಾಪಟು, ಉದ್ಯಮಿ ಕ್ರೀಡೋತ್ಸವ 2024ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣರಾವ್ ಯು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ.) ಬಾಳಿಲ ವಹಿಸಿದ್ದರು. ಪಿ ಜಿ ಎಸ್ ಎನ್ ಪ್ರಸಾದ್ ಸಂಚಾಲಕರು, ಸವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ.) ಬಾಳಿಲ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೋಶಾಧಿಕಾರಿ ಕೈಂತಜೆ ರಾಮ್ ಭಟ್ ಉಪಸ್ಥಿತರಿದ್ದರು. ಯಶೋಧರ ಎನ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರು ಸ್ವಾಗತಿಸಿದ ಕಾರ್ಯಕ್ರಮಕ್ಕೆ, ಉದಯಕುಮಾರ್ ರೈ.ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರು ವಂದನಾರ್ಪಣೆಗೈದರು. ಸಹಶಿಕ್ಷಕಿ ಸಹನಾ ಬಿ.ಬಿ ಕಾರ್ಯಕ್ರಮ ನಿರೂಪಿಸಿದರು.
ನ.30ರಂದು ನಡೆದ ಪೋಷಕರ ಕ್ರೀಡಾಕೂಟವನ್ನು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ.) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ಉದ್ಘಾಟಿಸಿದರು.