
ಪಂಚಶ್ರೀ ಯುವಕ ಮಂಡಲ, ಅಕ್ಷತಾ ಯುವತಿ ಮಂಡಲ, ಅಮೃತಾ ಮಹಿಳಾ ಮಂಡಲ ಪಂಬೆತ್ತಾಡಿ ಇವುಗಳ ಜಂಟಿ ಆಶ್ರಯದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ. 16 ಆದಿತ್ಯವಾರದಂದು ಪಂಬೆತ್ತಾಡಿ ಸಭಾಭವನದಲ್ಲಿ ನಾಗಪ್ಪ ಗೌಡ ಪಂಜಬೈಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಯುವಕ ಹಾಗೂ ಯುವತಿ ಮಂಡಲಗಳ ನೂತನ ಪದಾಧಿಕಾರಿಗಳಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ ಉಬರಡ್ಕ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ಮಹಿಳಾ ಮಂಡಲ ನೂತನ ಪದಾಧಿಕಾರಿಗಳಿಗೆ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಮಧುಮತಿ ಪ್ರಮಾಣ ವಚನ ಬೋದಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಯುವಕ ಮಂಡಲ ಸ್ಥಾಪಕ ಕಾರ್ಯದರ್ಶಿ ಲ।ಮಾಧವ ಗೌಡ ಜಾಕೆ ಹಾಗು ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಪವನ್ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಅಕ್ಷತಾ ಗೌತಮಿ ಪ್ರಾರ್ಥಿಸಿದರು ತೀರ್ಥಾನಂದ ಕೊಡೆಂಕೀರಿ ಕಾರ್ಯಕ್ರಮ ನಿರೂಪಿಸಿದರು ಶ್ರೀಧರ ಭೀಮಗುಳಿ ಧನ್ಯವಾದ ಸಮರ್ಪಿಸಿದರು
