ಇತ್ತೀಚೆಗೆ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿರುವಾಗ ಕಂಬ ಮುರಿದು ಕೆಳಕ್ಕೆ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮುಪ್ಪೇರ್ಯ ಗ್ರಾಮದ ಕಿಟ್ಟು ದೇವಸ್ಯರವರು ನ.27 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 48 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಜಯಂತಿ,ಪುತ್ರ ಕೀರ್ತಿಪ್ರಸಾದ್ ಪುತ್ರಿ ಲಿಶ್ಮಿತಾ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಇತ್ತೀಚೆಗೆ ಪಂಜ ಶಾಖೆಯ ವ್ಯಾಪ್ತಿಯಲ್ಲಿ ಕಂಬಕ್ಕೆ ಹತ್ತಿ ವಿದ್ಯುತ್ ಲೈನಿನ ಕೆಲಸ ಮಾಡುತ್ತಿರುವಾಗ ಕಂಬ ಮುರಿದ ಪರಿಣಾಮವಾಗಿ ಕಿಟ್ಟುರವರು ಕೆಳಕ್ಕೆ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನ.27 ರಂದು ಕೊನೆಯುಸಿರೆಳೆದರು.