Ad Widget

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಲೋಗೋ ಅನಾವರಣ

*ಶೀಘ್ರದಲ್ಲಿ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕ ಸ್ಥಾಪನೆ-ಶ್ರೀ ನಿರಂಜನ್ ಪೋಳ್ಯ*

. . . . . . . . .

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಲೋಗೋ ಅನಾವರಣ ಕಾರ್ಯಕ್ರಮ ನ.28ರಂದು ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿ ನೂತನ ಲೋಗೋ ಅನಾವರಣಗೊಳಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ವಸಂತ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು.

. . . . . . .

ಈ ಕಾರ್ಯಕ್ರಮದ ಮೊದಲು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಶ್ರೀ ನಿರಂಜನ್ ಪೋಳ್ಯ ಸಂಸ್ಥೆಯ ಮೂಲ ವಿಚಾರಗಳ ಬಗ್ಗೆ ವಿವರಿಸುತ್ತಾ ಜೇನು ಕೃಷಿಯಲ್ಲಿ ಗ್ರಾಮಜನ್ಯವು ವಿನೂತನ ಒಪ್ಪಂದ ಆಧಾರಿತ ಸಮುದಾಯ ಕೃಷಿಯಲ್ಲಿ ತೊಡಗಿದ್ದು, ಇದು ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಕಾರಣದಿಂದಾಗಿ ರಾಷ್ಟ್ರೀಯ ಜೇನು ಮಂಡಳಿಯ ವತಿಯಿಂದ ಭಾರತ ಸರಕಾರದ ಸಣ್ಣ ಕೃಷಿಕರ ವ್ಯಾಪಾರ ಒಕ್ಕೂಟ (SFAC) ವತಿಯಿಂದ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕ ಸ್ಥಾಪನೆಗೆ ರೂ. 2.22 ಕೋಟಿ ರೂಗಳ ಅನುದಾನ ನೀಡಿದ್ದು ಸುಮಾರು 4.5 ಕೋಟಿ ವೆಚ್ಚದ ಕಾರ್ಯಯೋಜನೆ ಕೆಲಸಗಳು ಪ್ರಗತಿಯಲ್ಲಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಪುತ್ತೂರಿನ ಮುಂಡೂರು ಪಂಚಾಯತ್ ವ್ಯಾಪ್ತಿಯ ಪಂಜಳದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು. ಇದರೊಂದಿಗೆ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ತರಲಿದ್ದೇವೆ ಎಂದರು. ಅಧ್ಯಕ್ಷರಾದ ಮೂಲಚಂದ್ರ ಕುಕ್ಕಾಡಿ ರವರು ಮಾತನಾಡುತ್ತಾ ಇದರ ಜೊತೆಯಲ್ಲಿ ಹಲಸು ಮೌಲ್ಯವರ್ಧನೆ ಹಾಗೂ ಬಿದಿರು ಕೃಷಿ ಸೇರಿದಂತೆ ಹಲವು ಕಾರ್ಯ ಯೋಜನೆಗಳು ನಡೆಯುತ್ತಿದೆ. ಸುಮಾರು ಹತ್ತು ಸಾವಿರದಷ್ಟು ಬಿದಿರು ಗಿಡ ವಿತರಿಸಲಾಗಿದೆ. ಬಿದಿರಿನಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಪ್ರಯೋಜನ ಕಾಣಲಿದ್ದೇವೆ ಎಂದರು. ಕಾಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಮಪ್ರತೀಕ್ ಕರಿಯಾಲ, ಶ್ರೀಹರ್ಷ ಎಕ್ಕಡ್ಕ, ಶ್ರೀನಂದನ ಕುಂಞಿಹಿತ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ, ಸಂಸ್ಥೆಯ ಸಿಬ್ಬಂದಿಗಳಾದ ಶಶಿಧರ ರಾವ್ ಹಾಗೂ ಪವನ್ ಎ.ಎಸ್
ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading