ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜಾಲ್ಸೂರು ಸೆಕ್ಷನ್ ಹಾಗೂ ಮಂಡೆಕೋಲು ಗ್ರಾಮದ ವಿದ್ಯುತ್ ಸಮಸ್ಯೆಗಳ ಬಗ್ಗೆ ಹಾಗೂ ಖಾಯಂ ಪವರ್ ಮ್ಯಾನ್ ಗಳನ್ನು ನೇಮಿಸುವಂತೆ ಆಗ್ರಹಿಸಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮುಂದಿನ ಎರಡು ತಿಂಗಳೊಳಗೆ ಪವರ್ ಮ್ಯಾನ್ ಗಳ ಸಮಸ್ಯೆ ಪರಿಹರಿಸುವುದಾಗಿ ಈ ಸಂದರ್ಭದಲ್ಲಿ ಇ.ಇ ರವರು ಆಶ್ವಾಸನೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಎಸ್.ಇ.ಇ. ಕೃಷ್ಣರಾಜ್, ಇಇ ರಾಮಚಂದ್ರ , ಎ.ಓ. ನಾರಾಯಣ ಶೆಣೈ, ಎಇಇ ಹರೀಶ್ ನಾಯ್ಕ್ ಹಾಗೂ ಜೂನಿಯರ್ ಇಂಜಿನಿಯರ್ ಗಳು, ಗ್ರಾಮಸ್ಥರಾದ ಸುರೇಶ್ ಕಣೆಮರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಬಾಲಚಂದ್ರ ದೇವರಗುಂಡ, ಚಂದ್ರಜಿತ್ ಮಾವಂಜಿ, ಅನಿಲ್ ತೋಟಪ್ಪಾಡಿ, ಪ್ರಖ್ಯಾತ್ ವಾಗ್ಲೆ, ನವೀನ್ ಮುರೂರು, ಪ್ರೀತೇಶ್ ಕಣೆಮರಡ್ಕ, ಲೋಕೇಶ್ ದೇವರಗುಂಡ ಉಪಸ್ಥಿತರಿದ್ದರು.
- Tuesday
- November 26th, 2024