
ಸುಬ್ರಹ್ಮಣ್ಯ ನ.26: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.27ರಿಂದ ಡಿ.12ರವರೆಗೆ ನಡೆಯಲಿದ್ದು, ನ.26 ರಂದು ಶುದ್ಧ ಏಕಾದಶಿ ದಿನದಂದು ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ಕ್ಷೇತ್ರದ ಮುಖ್ಯಪುರೋಹಿತರಾದ ಸೀತಾರಾಮ ಎಡಪಡಿತ್ತಾಯ ಅವರು ಶ್ರೀದೇವಳದ ಗರ್ಭಗುಡಿಗೆ ಪ್ರವೇಶಿಸಿ ಗಂಟೆ 11:20ಕ್ಕೆ ಹೊರಬಂದು ಭಕ್ತರಿಗೆ ಮೂಲಮೃತಿಕ ಪ್ರಸಾದವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಶತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಸಾದ್, ಶ್ರೀ ದೇವಳದ ಮಾಸ್ಟರ್ ಪ್ಲಾನ್ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರುಗಳಾದ ಸತೀಶ್ ಕುಜುಗೋಡು, ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಬಳ್ಪ, ಪವನ್ ಎಂ.ಡಿ ಸುಬ್ರಹ್ಮಣ್ಯ, ಸ್ಥಳೀಯ ಮುಖಂಡರುಗಳಾದ ಸುಧೀರ್ ಕುಮಾರ್ ಶೆಟ್ಟಿ ,ಅಶೋಕ ನೆಕ್ರಾಜೆ, ಕಿಶೋರ್ ಆರಂಪಾಡಿ, ಹರೀಶ್ ಇಂಜಾಡಿ, ಅಚ್ಯುತ ಗೌಡ ಸುಬ್ರಹ್ಮಣ್ಯ, ಕೂಜುಗೋಡು ಹಾಗೂ ಕಟ್ಟೆಮನೆ ಕುಟುಂಬಸ್ಥರು, ಮಲೆಕುಡಿಯ ಸಮದಾಯದ ಮುಖ್ಯಸ್ಥರು, ಊರವರು ಹಾಗೂ ಶ್ರೀ ದೇವಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
