- Tuesday
- November 26th, 2024
ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜಾಲ್ಸೂರು ಸೆಕ್ಷನ್ ಹಾಗೂ ಮಂಡೆಕೋಲು ಗ್ರಾಮದ ವಿದ್ಯುತ್ ಸಮಸ್ಯೆಗಳ ಬಗ್ಗೆ ಹಾಗೂ ಖಾಯಂ ಪವರ್ ಮ್ಯಾನ್ ಗಳನ್ನು ನೇಮಿಸುವಂತೆ ಆಗ್ರಹಿಸಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮುಂದಿನ ಎರಡು ತಿಂಗಳೊಳಗೆ ಪವರ್ ಮ್ಯಾನ್ ಗಳ ಸಮಸ್ಯೆ ಪರಿಹರಿಸುವುದಾಗಿ ಈ ಸಂದರ್ಭದಲ್ಲಿ ಇ.ಇ ರವರು ಆಶ್ವಾಸನೆ...
ಸುಬ್ರಹ್ಮಣ್ಯ ನ.25: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪಂಜ ಹಾಗೂ ಮಂಗಳೂರು ಲೀಜನ್ ಗಳ ಸ್ನೇಹ ಸಮ್ಮಿಲನ ರವಿವಾರ ಪಂಜ ಲಯನ್ಸ್ ಕ್ಲಬ್ ಸೇವಾ ಸದನದಲ್ಲಿ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಸೀನಿಯರ್ ಚೇಂಬರ್ ಲಿಜನ್ ಅಧ್ಯಕ್ಷ ದತ್ತಾತ್ರೇಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ. ಅರವಿಂದರಾವ್ ಕೇದಿಗೆ ಉಪಸ್ಥಿತರಿದ್ದರು ವೇದಿಕೆಯಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ...
ಸುಬ್ರಹ್ಮಣ್ಯ ನ.24: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ಏನೇ ಕಲ್ಲು ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಬಂದ ದಾರಿ ಹಾಗೂ ಅದರ ಸಂಪೂರ್ಣ ಮಾಹಿತಿ ಕಾರ್ಯಕ್ರಮ ನಡೆಯಿತು.ರೋಟರಿ ಜಿಲ್ಲೆ 31 81 ರ ಪೂರ್ವ ಜಿಲ್ಲಾ ಕಾರ್ಯದರ್ಶಿ ಹಾಗೂ ತರಬೇತುದಾರರಾದ ಮೈಸೂರಿನ ಕೆ.ಎಂ. ಹರೀಶ್ ಅವರು ಅಂತರರಾಷ್ಟ್ರೀಯ...
ಸುಬ್ರಹ್ಮಣ್ಯ ನ.25: ಕುಕ್ಕೆ ಫ್ರೆಂಡ್ಸ್ ಸುಬ್ರಮಣ್ಯ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಆಶಯದಲ್ಲಿ ಎರಡನೇ ವರ್ಷದ ಆಹ್ವಾನಿತ ಎಂಟು ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ಶನಿವಾರ ಸಂಜೆ ಸುಬ್ರಹ್ಮಣ್ಯದ ಕಾಶಿ ಕಟ್ಟೆ ಸರ್ಕಲ್ ಬೆಳೆಯ ಮೈದಾನದಲ್ಲಿ ನಡೆಯಿತು.ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಬ್ರಹ್ಮಣ್ಯದ ಉದ್ಯಮಿ ಯಜ್ಞೇಶ್ ಆಚಾರ್...
ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನೆರವೇರಲಿದ್ದು, ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ಸೇವೆಯು ನ.25 ರಿಂದ ಡಿ.12ರ ತನಕ ನೆರವೇರುವುದಿಲ್ಲ. ಡಿ.13 ರಿಂದ ಸರ್ಪ ಸಂಸ್ಕಾರ ಸೇವೆ ಆರಂಭವಾಗಲಿದೆ. ಆದರೆ ಇತರ...
ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ತಂಙಳ್ ರವರಿಂದ ಸ್ವಲಾತಿನ ಮಹತ್ವದ ಕುರಿತು ಸಂದೇಶ ನುಡಿ ಹಾಗೂ ದುವಾ ಮಜ್ಲೀಸ್ ಪೈಜಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಎರಡು ದಿನಗಳ ಕಾಲ ನಡೆದ ಅದ್ದೂರಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮಕ್ಕೆ ನ. 25 ರಂದು ತೆರೆ ಕಂಡಿತು. ಕೇರಳದ ಕೋಲಪ್ಪುರಂ ಭಾಗದ ಖ್ಯಾತ ವಾಗ್ಮಿ ಧಾರ್ಮಿಕ ಪಂಡಿತ...
ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ದಲ್ಲಿ ನ.25 ರಂದು ಕಾರ್ತಿಕ ದೀಪಾರಾಧನೆ ನಡೆಯಿತು. ಕಾರ್ತಿಕ ಮಾಸದಲ್ಲಿ ಪೂರ್ವ ಸಂಪ್ರದಾಯದಂತೆ ನಿರಂತರವಾಗಿ ಅಜ್ಜಾವರ ಗ್ರಾಮದ ವಾಣಿಯ ಗಾಣಿಗ ಸಮಾಜದ ಭಾಂಧವರು ಒಂದು ದಿನದ ಕಾರ್ತಿಕ ದೀಪಾರಾಧನೆಯನ್ನು ಮಾಡುತ್ತಿದ್ದು ಅದೇ ಪ್ರಕಾರ ಈ ಬಾರಿಯೂ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರು ಸಹಿತ...