Ad Widget

ಅಪಾಯ ಆಹ್ವಾನಿಸುತ್ತಿರುವ ಅರಂತೋಡು ಎಲಿಮಲೆ ರಸ್ತೆ – ನಿರ್ವಹಣೆಯೇ ಮಾಡದಿರುವ ಬಗ್ಗೆ ಜನತೆ ಆಕ್ರೋಶ – ಪ್ರತಿಭಟನೆಗೆ ಸಿದ್ಧತೆ

ಕಳೆದ ವಿಧಾನ ಸಭಾ ಚುನಾವಣೆ ವೇಳೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆ ಭಾಗದ ಜನತೆ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಿದ ಬಳಿಕ ಆಡಳಿತ ,ಸುಮಾರು ಮೂರು ಕೋಟಿ ವೆಚ್ಚದಲ್ಲಿ ಅರಂತೋಡಿನ ವೈ. ಎಂ. ಕೆ. ಕ್ರಾಸ್ ನಿಂದ ಪಿಂಡಿಮನೆವರೆಗೆ 3.3 ಕಿ ಮೀ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡಿದೆ. ಪಿಂಡಿಮನೆಯಿಂದ ಕೊಜಂಬೆವರೆಗೆ ಒಂದು ಕೋಟಿ ವೆಚ್ಚದಲ್ಲಿ ಮರುಡಾಮರಿಕರಣ ಮಾಡಲಾಗಿದೆ. ಆದರೆ ಪಿಂಡಿಮನೆಯಿಂದ ಕೊಜಂಬೆ ವರಗೆ ಮರುಡಾಮರಿಕರಗೊಂಡ ಬಳಿಕ ರಸ್ತೆ ಬದಿ ಮಣ್ಣು ಹಾಕಿ ಸಮತಟ್ಟು ಮಾಡಿಲ್ಲ ಹಾಗೂ ರಸ್ತೆ ಬದಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯದೇ, ಚರಂಡಿ ನಿರ್ವಹಣೆಯೂ ಮಾಡದೇ ಇರುವುದರಿಂದ ದ್ಬಿಚಕ್ರ ವಾಹನ ಸವಾರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹದೇ ಸಮಸ್ಯೆಯಿಂದಾಗಿ ಉಬರಡ್ಕದಲ್ಲಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿನಿಯೋರ್ವಳು ಬಲಿಯಾಗಿದ್ದಳು. ಇದರಿಂದಾದರೂ ಇಲಾಖೆ ಎಚ್ವೆತ್ತು ರಸ್ತೆ ಬದಿ ಹಬ್ಬಿರುವ ಕಾಡು ಬಳಿಗಳನ್ನು ತೆರವುಗೊಳಿಸಬೇಕಿದೆ.

. . . . .

.
ಅರಂತೋಡುನಿಂದ ಪಿಂಡಿಮನೆ ತನಕ 3.3 ಕಿ ಮೀ ರಸ್ತೆಯನ್ನು ಅಭಿವೃದ್ಧಿಗೊಂಡ ರಸ್ತೆ ಬದಿ ಕಾಡು ಕಡಿಯದೆ ಅರ್ಧ ರಸ್ತೆ ಮುಚ್ಚಿಕೊಂಡಿತ್ತು. ಇದೀಗ ಜನರ ಒತ್ತಾಯದ ಮೇರೆಗೆ ಗುತ್ತಿಗೆದಾರರು 3.3ಕೀ. ಮೀ ರಸ್ತೆ ಬದಿ ಬೆಳೆದ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಿದ್ದಾರೆ. ಆದರೇ ಚರಂಡಿ ನಿರ್ವಹಣೆ ಮಾಡಿಲ್ಲ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೇ ನೀರೆಲ್ಲಾ ಪುನಃ ರಸ್ತೆಯಲ್ಲಿ ಹರಿದು ರಸ್ತೆಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸಾರ್ವಜನಿಕರ ಹಣ ಪೋಲಾಗದಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ,ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.

.
ಪಿಂಡಿಮನೆಯಿಂದ ಕೊಜಂಬೆವರೆಗೆ ರಸ್ತೆ ಮರುಡಾಮರೀಕರಣಗೊಂಡರೂ ನಿರ್ವಹಣೆಯಿಲ್ಲದೇ ಹಲವಾರು ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗುತ್ರಿದೆ. ರಸ್ತೆ ತೀರಾ ಇಕ್ಕಟ್ಟಾಗಿರುವುದು ಮಾತ್ರವಲ್ಲದೇ ರಸ್ತೆ ಬದಿ ಕಾಡು ಗಿಡ ಗಂಟಿಗಳು ಬೆಳೆದು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಅತೀ ಹೆಚ್ಚು ಪ್ರವಾಸಿಗರ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಹತ್ತಿರ ಬರುವವರೆಗೂ ಗೋಚರಿಸದೆ ಇರುವ ಕಾರಣದಿಂದ ದಿನಕ್ಕೊಂದು ಆಫಘಾತಗಳು ನಡೆಯುತ್ತಿದೆ. ಶೀಘ್ರದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವ ನಡೆಯಲಿದ್ದು ಅರಂತೋಡು ಎಲಿಮಲೆ ರಸ್ತೆಯಲ್ಲಿ ದಿನ0ಪ್ರತಿ ಸಾವಿರಾರು ಯಾತ್ರಾರ್ಥಿಗಳ ವಾಹನಗಳು ಹಗಲು ಇರುಳೆನ್ನದೆ ಸಂಚರಿಸಲಿದೆ. ಆದರೇ ರಸ್ತೆ ನಿರ್ವಹಣೆ ಮಾಡದೇ ಇದ್ದಲ್ಲಿ ಅವಘಡಗಳು ನಡೆದರೇ ಇಲಾಖೆಗಳೇ ನೇರ ಹೊಣೆ ಹೊರಬೇಕು. ಈ ರಸ್ತೆಗಳ ನಿರ್ವಹಣೆ ಗುತ್ತಿಗೆದಾರರದ್ದು ಎಂಬ ಮಾಹಿತಿ ಲಭಿಸಿದ್ದು, ಜನತೆ ಹಲವು ಬಾರಿ ಇಲಾಖೆಗೆ ಫೋನ್ ಮೂಲಕ ನೆನಪಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಲಾಖೆಯ ನಿರ್ಲಕ್ಷ್ಯ ಇದೇ ರೀತಿ ಮುಂದುವರೆದಲ್ಲಿ ಊರವರ ಜತೆ ಸೇರಿ ಪಿಡ್ಬ್ಲ್ಯೂಡಿ ಇಲಾಖೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ನಾಗರಿಕರು ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!