- Wednesday
- April 2nd, 2025

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ತೃತೀಯ ಬಿ ಎ ವಿದ್ಯಾರ್ಥಿನಿ ಗಾನ ಬಿ ಡಿ ಮಂಗಳೂರಿನ ಎಸ್ ಸಿ ಎಸ್ ಪದವಿ ಕಾಲೇಜಿನವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಅಂತರ್ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ. ಈಕೆ ಬಲ್ಕಾಡಿಯ ಧನಂಜಯ ಮತ್ತು ಜಲಜಾಕ್ಷಿಯವರ ಪುತ್ರಿಯಾಗಿದ್ದಾಳೆ.

ಸುಳ್ಯ ನಗರದ ಕಟ್ಟೆಕಾರ್ ಬಳಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ರಿದ್ದು ರಸ್ತೆಯಲ್ಲಿ ಹರಿಯುತ್ತಿದ್ದು ಹೊಳೆಯಂತಾಗಿದೆ. ಅಪಾರ ನೀರು ಪೋಲಾಗುತ್ತಿದ್ದು ನಗರ ಪಂಚಾಯತ್ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.

ಗುತ್ತಿಗಾರು: ನ.21: ಅಂಗನವಾಡಿ ಬಾಲ ವಿಕಾಸ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ವತಿಯಿಂದ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ನ. 20ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಸಾದ್ ಹೂವನ ವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ಉದ್ಘಾಟಿಸಿದರು. ವೇದಿಕೆಯಲ್ಲಿ ಸುಳ್ಯ...

ಅರಂತೋಡು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ನ.21ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಸುಮಾರು 14 ಮನೆ ಗಳಿಗೆ ಸಂಪರ್ಕ ಕಲ್ಪಿಸುವ 30ವರ್ಷಗಳಿಂದ ಊರ್ಜಿತ ದಲ್ಲಿರುವ ಆರಂತೋಡು, ಅಳಿಕೆ - ಕಲ್ಲುಗದ್ದೆ ಪಂಚಾಯತ್ ರಸ್ತೆಯನ್ನು ಪಂಚಾಯತಿನ ಅವಾಹಗನೆ ತರದೆ ಖಾಸಗಿ ವ್ಯಕ್ತಿಗಳು ರಸ್ತೆಯನ್ನು ಬಂದ್ ಮಾಡಲು...

ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು. ಪೆರಾಜೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನವನ್ನು ಕಳ್ಳನೊಬ್ಬ ಕದಿಯಲು ಯತ್ನಿ ಸಿದ್ದು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನ 20 ರಂದು ರಾತ್ರಿ ಸುಮಾರು 10 ಘಂಟೆಗೆ ನಡೆದಿದೆ. ಪೆರಾಜೆ ಮಸೀದಿ ಬಳಿ ಮುಖ್ಯ ರಸ್ತೆಯ ಬದಿ ಇರುವ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ...

ವೈದ್ಯಾಧಿಕಾರಿ ಡಾ. ಕರುಣಾಕರ ರವರಿಂದ ಪತ್ರಿಕಾ ಪ್ರಕಟಣೆ ಸುಳ್ಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ವಾಹನ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಆಂಬುಲೆನ್ಸ್ ಚಾಲಕರ ಮತ್ತು ಆಸ್ಪತ್ರೆಯ ವೈದ್ಯರ ನಡುವೆ ನಡೆಯುತ್ತಿದ್ದ ಪರ ವಿರೋಧ ಆರೋಪಗಳನ್ನು ನವಂಬರ್ 21ರಂದು ವೈದ್ಯಾಧಿಕಾರಿ ಡಾ. ಕರುಣಾಕರ ರವರ ನೇತೃತ್ವದಲ್ಲಿ ಮಾತುಕತೆ ನಡೆದು ವಿಷಯವನ್ನು ಇತ್ಯರ್ಥಪಡಿಸಿರುವುದಾಗಿ ವೈದ್ಯರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ....