ಸುಬ್ರಹ್ಮಣ್ಯ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಗೆ ಈ ವರ್ಷ ರಾಷ್ಟ್ರ ಅಧ್ಯಕ್ಷರಾದ ಚಿತ್ರ ಕುಮಾರ್ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದರು.
ಆರಂಭದಲ್ಲಿ ರಾಷ್ಟ್ರಾಧ್ಯಕ್ಷ ರನ್ನು ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ನ ಅಧ್ಯಕ್ಷ ಡಾ.ರವಿಕಕ್ಕೆ ಪದವು, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಸದಸ್ಯರುಗಳಾದ ಗೋಪಾಲ ಎಣ್ಣೆ ಮಜಲು, ಅಶೋಕ್ ಕುಮಾರ್ ಮೂಲೆಮಜಲು ,ಪ್ರಭಾಕರ ಪಟ್ರೆ, ಮೋಹನದಾಸ್ ರೈ, ಮಣಿಕಂಠ, ನಾಗೇಶ್ ನೆಕ್ರಾಜೆ ಮುಂತಾದವರು ಬರಮಾಡಿಕೊಂಡರು. ರಾಷ್ಟ್ರಾಧ್ಯಕ್ಷರೊಂದಿಗೆ ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫರ್ನಾಂಡಿಸ್, ರಾಷ್ಟ್ರಾಧ್ಯಕ್ಷರ ಕಾರ್ಯದರ್ಶಿ ಸುಕುಮಾರ್ ಜೊತೆಗಿದ್ದರು. ಅಲ್ಲಿಂದ ಡಾ. ರವಿ ಕಕ್ಕೆ ಪದವು ಅವರು ನಿರ್ಮಿಸಿಕೊಟ್ಟ ತೀರ ಆರ್ಥಿಕ ಸಂಕಷ್ಟದಲ್ಲಿರುವ ಹಾಗೂ ಆಟೋ ಚಾಲಕ-ಮಾಲಕ ಸಂಘದ ಮಾಜಿ ಅಧ್ಯಕ್ಷರಾದ ದಿ.ಪುಟ್ಟಣ್ಣ ವಾಲಗದಕೇರಿ ಅವರ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿಕೊಟ್ಟ ಮನೆಯನ್ನು ರಾಷ್ಟ್ರಾಧ್ಯಕ್ಷರಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ದಿ.ಪುಟ್ಟಣ್ಣ ಅವರ ಪತ್ನಿ ಹೇಮಾವತಿ ಹಾಗೂ ಮಕ್ಕಳು, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಕುಟುಂಬಸ್ಥರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಉಮೇಶ ಕೆ ಎನ್ ಅವರು ದಿವಂಗತ .ಪುಟ್ಟಣ್ಣ ಅವರ ಕುಟುಂಬಕ್ಕೆ ರೂ.10000/=ವನ್ನು ಹಸ್ತಾಂತರಿಸಿದರು.
ತದನಂತರ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅಲ್ಲಿ ಸಾಧಕರುಗಳಾದ ಈಶ್ವರ ಗೌಡ ಕಲ್ಪನೆ, ಕುಶಾಲಪ್ಪ ಗೌಡ ನೂಚೀಲ, ನಾಗೇಶ್ ನೆಕ್ರಾಜೆ, ಕಡಬ ಶ್ರೀನಿವಾಸ ರೈ ಅವರುಗಳನ್ನು ಸನ್ಮಾನಿಸಲಾಯಿತು. ತೀರ ಸಂಕಷ್ಟದಲ್ಲಿರುವ ಮೀನಾಕ್ಷಿ ನಡುಗಲ್ಲು ಅವರ ಕುಟುಂಬಕ್ಕೆ ಮನೆ ನಿರ್ಮಿಸಲು ನಿವೇಶನ ಪತ್ರವನ್ನು ನೀಡಲಾಯಿತು.
ವೇದಿಕೆಯಲ್ಲಿ ರಾಷ್ಟ್ರಾಧ್ಯಕ್ಷ ಚಿತ್ರ ಕುಮಾರ್ ,ರಾಷ್ಟ್ರ ಉಪಾಧ್ಯಕ್ಷ ಕಿಶೋರ್ ಪೆರ್ನಾಂಡಿಸ್ ,ರಾಷ್ಟ್ರ ಅಧ್ಯಕ್ಷರ ಕಾರ್ಯದರ್ಶಿ ಸುಕುಮಾರ್, ಕುಮಾರಸ್ವಾಮಿ ಶಾಲಾ ಸಂಚಾಲಕ ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ,ಪ್ರಭಾರ ಕಾರ್ಯದರ್ಶಿ ಅಶೋಕ ಕುಮಾರ ಮೂಲೆಮಜಲು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆ ಪದವು ಸ್ವಾಗತಿಸಿ ಗೋಪಾಲ ಎಣ್ಣೆಮಜಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.