- Thursday
- November 21st, 2024
ಸಂಪಾಜೆ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಇದೀಗ ಸುಮಾರು 9 ಗಂಟೆಯ ವೇಳೆಗೆ ಚಿರತೆ ಮರಿಯೊಂದು ಕಾಡಿನಿಂದ ರಸ್ತೆ ಮಾರ್ಗವಾಗಿ ದಾಟುವ ಸಂದರ್ಭದಲ್ಲಿ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ವಾನಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ . ಸದ್ಯ ಅರಣ್ಯ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು ಇದರ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಗಾಂಧಿನಗರ ವೈನ್ ಶಾಪ್ ಬಳಿ ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಕೆಲವು ಹೊತ್ತು ಅವರೊಳಗೆ ಗಲಾಟೆ ಮಾಡಿಕೊಂಡು ಆತಂಕ ಸೃಷ್ಟಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. https://youtube.com/shorts/FkSqp5uM9M0?si=5PCLqgZn1kacbDkN ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ಚೀಲದಿಂದ ತಲವಾರ್ ರೀತಿಯ ಕತ್ತಿಯನ್ನು ಹೊರಗೆ ತೆಗೆದು ಮತ್ತೆ ಚೀಲದಲ್ಲಿ ಇರಿಸುವ ದೃಶ್ಯ ಕಂಡು ಬರುತ್ತಿದೆ. ಸ್ವಲ್ಪ ಮುಂದಕ್ಕೆ...
ಪುಳಿಕುಕ್ಕು ಗಿರಿಯಮಜಲು ಕುಟುಂಬಕ್ಕೆ ಸಂಬಂಧಿಸಿದ ಏಳ್ವೆರ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದು ನ.20 ರಂದು ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ತಂತ್ರಿಗಳಾದ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಪ್ರಮುಖರಾದ ಕುಶಾಲಪ್ಪ ಗೌಡ ಹೊಳೆಕೆರೆ, ಶಿವಪ್ಪ ಗಿರಿಯಮಜಲು, ತಿಮ್ಮಪ್ಪ ಪೊಯ್ಯಮಜಲು, ಪರಮೇಶ್ವರ ಪುಳಿಕುಕ್ಕು ಹಾಗೂ ಕುಟುಂಬಸ್ಥರು, ಊರವರು...
ಅಧ್ಯಕ್ಷರಾಗಿ ಹೊನ್ನಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಗೀತಾ ಕಟ್ಟತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇಲ್ಲಿ ಇತ್ತೀಚೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶ್ರೀ ಹೊನ್ನಪ್ಪ ನಾಯ್ಕ ಉದ್ದಂಪಾಡಿ , ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಕಟ್ಟತ್ತಾರು ಆಯ್ಕೆಯಾದರು. ಸದಸ್ಯರಾಗಿ ಶ್ರೀಮತಿ ಲೀಲಾವತಿ, ಶ್ರೀ ರಮೇಶ, ಶ್ರೀಮತಿ ಕುಸುಮ ಶ್ರೀಮತಿ ಪ್ರೇಮಾ ಮುಚ್ಚಿನಡ್ಕ...
ಸುಬ್ರಹ್ಮಣ್ಯ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಗೆ ಈ ವರ್ಷ ರಾಷ್ಟ್ರ ಅಧ್ಯಕ್ಷರಾದ ಚಿತ್ರ ಕುಮಾರ್ ಅವರು ಮಂಗಳವಾರ ಅಧಿಕೃತ ಭೇಟಿ ನೀಡಿದರು.ಆರಂಭದಲ್ಲಿ ರಾಷ್ಟ್ರಾಧ್ಯಕ್ಷ ರನ್ನು ಕುಮಾರಧಾರ ದ್ವಾರದ ಬಳಿ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ನ ಅಧ್ಯಕ್ಷ ಡಾ.ರವಿಕಕ್ಕೆ ಪದವು, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಸದಸ್ಯರುಗಳಾದ ಗೋಪಾಲ ಎಣ್ಣೆ...
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು, ಸಹಕಾರ ಇಲಾಖೆ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ನಿ., ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರ ಸಹಕಾರಿ ಸಂಘಗಳ ಸಹಕಾರದೊಂದಿಗೆ...
ಒಸಾಟ್ ಸಂಸ್ಥೆ ವತಿಯಿಂದ 1 ಕೋಟಿ ರೂ ವೆಚ್ಚದಲ್ಲಿ ಸುಳ್ಯ ಸ.ಪ.ಪೂ. ಕಾಲೇಜು ಕೊಠಡಿ ಮತ್ತು ನೂತನ ಸಭಾಭವನಕ್ಕೆ ಶಿಲಾನ್ಯಾಸ
ಸಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಅಮೇರಿಕಾದ ಒಸಾಟ್ ಸಂಸ್ಥೆ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿ ನಿರ್ಮಾಣವಾಗಲಿದ್ದು, ಅದರ ಶಿಲಾನ್ಯಾಸ ಕಾರ್ಯಕ್ರಮ ನ.20ರಂದು ನಡೆಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಪುರೋಹಿತ ನಾಗರಾಜ ಭಟ್ ರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು, ಅಕಾಡೆಮಿ...
ಸುಳ್ಯ ನಗರ ಪಂಚಾಯತ್ ವತಿಯಿಂದ ಜ್ಯೋತಿ ಸರ್ಕಲ್ ನಿಂದ ನಿರೀಕ್ಷಣಾ ಮಂದಿರದ ರಸ್ತೆಯ ಬಲಬದಿಯಲ್ಲಿ ನೂತನವಾಗಿ ನಿರ್ಮಿಸಿದ ಉದ್ಯಾನವನಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ನಾಮಕರಣ ಮಾಡುವಂತೆ ಹಾಗೂ ಪುತ್ಥಳಿ ನಿರ್ಮಿಸುವಂತೆ ಸುಳ್ಯರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಇಂದು ಮನವಿ ನೀಡಲಾಯಿತು.ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ ರವರಲ್ಲಿ ಮನವಿ ಪತ್ರವನ್ನು ರಾಷ್ಟ್ರಾಭಿಮಾನಿಗಳ ಬಳಗದ ಸಂಚಾಲಕ ಉಮೇಶ್ ಪಿ.ಕೆ...
ವೈದ್ಯರಿಗೊಂದು ನ್ಯಾಯ ಆಂಬುಲೆನ್ಸ್ ಚಾಲಕರಿಗೊಂದು ನ್ಯಾಯವಾ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ವಾಹನ ನಿಲುಗಡೆಗೆ ಕಾಯ್ದಿರಿಸಿದ ಸ್ಥಳದಲ್ಲಿ ನ.19 ರಂದು ಮಧ್ಯಾಹ್ನ ವೇಳೆ ಖಾಸಗಿ ಆಂಬುಲೆನ್ಸ್ ವಾಹನವೊಂದು ನಿಲ್ಲಿಸಿದ್ದು ಇದರ ಫೋಟೋ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣ ವಾಗಿದೆ.ಇದೇ ರೀತಿಯ ಘಟನೆ ಕಳೆದ ಕೆಲವು ದಿನಗಳ...
Loading posts...
All posts loaded
No more posts