ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ತಾರಾನಾಥ ಕುದ್ಪಾಜೆ ನಿಧನಕ್ಕೆ ಸುಳ್ಯ ತಾಲೂಕು ರೈತ ಘಟಕ ಸಂತಾಪ ವ್ಯಕ್ತಪಡಿಸಿದೆ.
ಹಲವಹ ರೈತ ಪರ ಹೋರಾಟಗಳಲ್ಲಿ ಭಾಹವಹಿಸುವುದರೊಂದಿಗೆ ರೈತ ಪರ ಕಾಳಜಿ ಹೊಂದಿದ್ದ ತಾರಾನಾಥ ಗೌಡ ಕುದ್ಪಾಜೆ ನ.17 ರಂದು ನಿಧನರಾಗಿದ್ದರು. ಇವರ ನಿಧನಕ್ಕೆ ಸುಳ್ಯ ತಾಲೂಕು ರೈತ ಸಂಘದಿಂದ ನ 18 ರಂದು ಸಂತಾಪ ಸಭೆ ಸಂಘದ ಕಚೇರಿಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ, ಸುದರ್ಶನ ಕೊಯಿಂಗೋಡಿ, ತಾಲೂಕು ಗೌರವವಾಧ್ಯಕ್ಷರಾದ ನೂಜಾಲು ಪದ್ಮನಾಭ ಗೌಡ, ಅಧ್ಯಕ್ಷರಾದ ಲೋಲಾಜಾಕ್ಷ ಭೂತಕಲ್ಲು, ಉಪಾಧ್ಯಕ್ಷರಾದ ಮಾಧವ ಗೌಡ ಸುಳ್ಯಕೋಡಿ, ರೈತ ಮುಖಂಡರುಗಳಾದ ಸೆಬಾಸ್ಟಿಯನ್ ಮಡಪ್ಪಾಡಿ, ದೇವಪ್ಪ ಕುಂದಲ್ಪಾಡಿ, ಚೆನ್ನ ಕೇಶವ ಖಂಡಿಗೆ ಮೂಲೆ, ರೋಹನ್ ಪೀಟರ್ ಉಬ್ಬರಡ್ಕ, ವಸಂತ ಪೆಲ್ತಡ್ಕ, ಮುರಳಿಧರ ಅಡ್ಕಾರು, ತೀರ್ಥರಾಮ ಬಾಳೆಕಜೆ, ಮಂಜುನಾಥ ಮಡ್ತಿಲ, ಮುರಳಿಧರ ರೈ ಮತ್ತಿತರರಿದ್ದರು.