ಬಾ ಮಗು ಒಮ್ಮೆ ಬರೆದು ನೋಡು ಮಕ್ಕಳ ಹಸ್ತ ಪ್ರತಿ ತಯಾರಿ ಕಾರ್ಯಗಾರ
ಬರವಣಿಗೆಯಲ್ಲಿ ತಲ್ಲೀನರಾದ ವಿದ್ಯಾರ್ಥಿಗಳು..ಕೇವಲ ಹತ್ತೇ ನಿಮಿಷದಲ್ಲಿ ಹಸ್ತ ಪ್ರತಿ ತಯಾರಿ
ವಿದ್ಯಾರ್ಥಿ ಜೀವನದ ಹಸ್ತಪ್ರತಿಗಳು ಭವಿಷ್ಯದ ಸಾಹಿತ್ಯಗಳಾಗಿ ಸಮಾಜಕ್ಕೆ ಕೊಡುಗೆಯಾಗಬಹುದು : ಲೇಖಕಿ ಅಶ್ವಿನಿ ಕೋಡಿಬೈಲು
ಕರ್ನಾಟಕ ಸರ್ಕಾರ,ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು , ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ಶಾಲಾ ವಿಭಾಗ ಇವರ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2024ರ ಅಂಗವಾಗಿ ಬಾ ಮಗು ಒಮ್ಮೆ ಬರೆದು ನೋಡು ಮಕ್ಕಳ ಹಸ್ತ ಪ್ರತಿ ತಯಾರಿ ಕಾರ್ಯಗಾರ ನ. 19 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಡೆಯಿತು.
ಬರಹಗಾರರಾದ ಅಶ್ವಿನಿ ಕೋಡಿಬೈಲು ಕಾರ್ಯಗಾರ ನಡೆಸಿಕೊಟ್ಟರು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್.ಡಿ.ಎಂ ಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್ ಡಿ ಎಂ ಸಿ ಸದಸ್ಯರಾದ ಹರ್ಷ ಭಟ್ ಜೋಗಿಬೆಟ್ಟು ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪ ಪ್ರಾoಶುಪಾಲೆ ಉಮಾಕುಮಾರಿ ಗ್ರಂಥಪಾಲಕಿ ಶಶಿಕಲಾ, ಶಾಲಾ ವಿದ್ಯಾರ್ಥಿ ನಾಯಕ ಧನುಷ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಂಶನಾ ಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸ್ಕೌಟ್ಸ್ &ಗೈಡ್ಸ್ ಶಿಕ್ಷಕಿ ರಾಜೀವಿ ರೈ ಮತ್ತು ಶಿಕ್ಷಕ ರಾಜನಾಯಕ ಸಹಕರಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಮುಖ್ಯ್ಯೊಪಾಧ್ಯಾಯರಾದ ಮಾಯಿಲಪ್ಪ ಜಿ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿ ಮಹತಿ ಎ ರಾವ್ ಪ್ರಾರ್ಥಿಸಿದರು ಸಹ ಶಿಕ್ಷಕಿ ಸುಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಸಹ ಶಿಕ್ಷಕರು ಸಹಕರಿಸಿದರು.