ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ವಿಷಯಾಧಾರಿತ ಸ್ಪರ್ಧಾ ಕಾರ್ಯಕ್ರಮ ನವೆಂಬರ್ 16ರಂದು ನಡೆಯಿತು. ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ ಕಾರ್ಯಕ್ರಮ ಉದ್ಘಾಟಿಸಿ ಪ್ರಾಚ್ಯ ವಸ್ತುಗಳ ಮಾಹಿತಿ ತಿಳಿದುಕೊಂಡು ಅದನ್ನು ಕಾಪಾಡಿಕೊಳ್ಳುವ ಅನಿವಾರ್ಯ ಇದೆ ಎಂದು ತಿಳಿಸಿದರು. ಪ್ರಾಚ್ಯ ವಸ್ತುಗಳ ವಸ್ತು ಪ್ರದರ್ಶನವನ್ನು ಶ್ರೀಮತಿ ಸಂಧ್ಯಾ ಕುಮಾರಿ ಉದ್ಘಾಟಿಸಿದರು. ಹಳೆಯ ಕಾಲದ ಹಲವು ವಸ್ತುಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿ ಪರಿಚಯಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಮೇದಪ್ಪ ಗೌಡ ಎ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಶ್ರೀ ವೆಂಕಪ್ಪ ಗೌಡ ಆಲಾಜೆ, ಶ್ರೀ ಉಣ್ಣಿಕೃಷ್ಣನ್, ಶ್ರೀ ಜಯಂತ ಕೆ, SDMC ಸದಸ್ಯರಾದ ಸುವರ್ಣ ಜಾಕೆ, ಶ್ರೀಮತಿ ಶಾಲಿನಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಶ್ರೀ ಟೈಟಸ್ ವರ್ಗೀಸ್ ಸ್ವಾಗತಿಸಿ, ಶಿಕ್ಷಕರಾದ ಶ್ರೀ ಸಂತೋಷ್ ವಂದಿಸಿದರು. ಶ್ರೀ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024