Ad Widget

ಸುಬ್ರಹ್ಮಣ್ಯ: ಸ್ಕೌಟ್ ಗೈಡ್ ವಾರ್ಷಿಕ ಮೇಳ

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವತಿಯಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇವರ ಸಹಯೋಗದಲ್ಲಿ ಸ್ಕೌಟ್ ಗೈಡ್ ವಾರ್ಷಿಕ ಮೇಳ 2024-25 ನ.8 ಮತ್ತು ನ.9ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿತು. ವಾರ್ಷಿಕ ಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾ ನಾಯಕ್ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಳ್ಯ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಅರವಿಂದ ಅಯ್ಯಪ್ಪ ಸುತಗುಂಡಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತರಾದ ಮಹಮದ್ ತುಂಬೆ, ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ವಿಮಲಾ ರಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಿಮ್ ಕುಮಾರ್, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಎಂ ಜಿ ಕಜೆ , ಸ್ಥಳೀಯ ಸಂಸ್ಥೆಯ ಏ ಡಿ ಸಿ ದೇವಿಪ್ರಸಾದ್ ಜಾಕೆ, ಸಂಸ್ಥೆಯ ಪ್ರಾಚಾರ್ಯರಾದ ಡಾ.ದಿನೇಶ ಪಿ ಟಿ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಪಂಜ ಸ್ಥಳೀಯ ಉಪಾಧ್ಯಕ್ಷರುಗಳಾದ ಸೋಮಶೇಖರ ನೇರಳ, ಬಾಲಕೃಷ್ಣ ಹೇಮಳ, ರ‍್ಯಾಲಿಯ ಸಂಯೋಜಕರಾದ ಮನೋಹರ್ ಮತ್ತು ಪ್ರಮೀಳಾ ಎನ್, ಸ್ಕೌಟ್ ನಾಯಕರಾದ ಅರವಿಂದ ಬಾಳಿಲ ಮತ್ತು ಗೈಡ್ ನಾಯಕಿ ಸರೋಜಿನಿ ಕರಿಕ್ಕಳ, ರೋವರ್ ಲೀಡರ್ ರಾಮಪ್ರಸಾದ್ ಹಾಗೂ ರೇಂಜರ್ ಲೀಡರ್ ಶ್ರೀಮತಿ ಅಶ್ವಿನಿ ಎಸ್ ಎನ್, ರ‍್ಯಾಲಿಯ ನಿರ್ದೇಶಕರಾದ ದಾಮೋದರ ನೇರಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 12 ಕಬ್, 12 ಬುಲ್ ಬುಲ್, 220 ಸ್ಕೌಟ್, 243 ಗೈಡ್, 48 ರೋವರ್, 52 ರೇಂಜರ್ಸ್ ಹಾಗೂ 51 ಮಂದಿ ಶಿಕ್ಷಕರು ಒಟ್ಟು ಸೇರಿ 638 ಮಂದಿ ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ ಸ್ವಾಗತಿಸಿ, ಉಪಾಧ್ಯಕ್ಷ ಸೋಮಶೇಖರ್ ನೇರಳೆ ವಂದಿಸಿದರು. ಈ ಕಾರ್ಯಕ್ರಮವನ್ನು ಕಾರ್ಯದರ್ಶಿ ಉದಯಕುಮಾರ್ ರೈ ಬಾಳಿಲ ನಿರೂಪಿಸಿದರು. ತದನಂತರ ಸ್ಕೌಟರ್ ಗೈಡರ್ಸ್ ಗಳ ಸಮಾಲೋಚನಾ ಸಭೆ ನಡೆಯಿತು. ದಿನಚರಿಯಂತೆ ಸ್ಕೌಟ್ ಮತ್ತು ಗೈಡ್ ಚಟುವಟಿಕೆಗಳು ಜರುಗಿದವು.

. . . . . . . . .

ಗೈಡ್ಸ್ ವಿಭಾಗಕ್ಕೆ ಹೊರ ಸಂಚಾರ ಮತ್ತು ಸ್ವಚ್ಛತಾ ಅಭಿಯಾನ, ಗೂಡು ದೀಪ ತಯಾರಿ, ಗಾಳಿಪಟ ತಯಾರಿಕೆ ನಡೆಯಿತು. ಸ್ಕೌಟ್ ವಿಭಾಗಕ್ಕೆ ಸಾಹಸಮಯ ಚಟುವಟಿಕೆ, ಮೋಜಿನ ಆಟಗಳು ಜರುಗಿತು.

ಸಂಜೆ ನಗರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಶ್ರೀ ಕಾರ್ತಿಕ್ ಇವರು ಉದ್ಘಾಟಿಸಿದರು.
ಕಾಲೇಜಿನ ಆವರಣದಿಂದ ಹೊರಟ ಮೆರವಣಿಗೆಯು ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ದ್ವಾರದ ಹೊರಗೆ ತೆರಳಿ ಬಿಲದ್ವಾರದ ಮೂಲಕ ಹಿಂದಿರುಗಲಾಯಿತು. ಈ ಮೆರವಣಿಗೆಗೆ ಕೆ.ಎಸ್.ಎಸ್ ಕಾಲೇಜಿನ ಬೆಂಡ್ ಸೆಟ್ ವಾದನ ಮೆರುಗು ನೀಡಿತು. ಸಂಜೆ ಗಂಟೆ 6ರಿಂದ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅನಂತರ ಶಿಬಿರಾಗ್ನಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ರಾಜೇಶ್ ಎನ್ ಎಸ್ ಅಧ್ಯಕ್ಷರು ಕಾಲೇಜಿನ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಗಣೇಶ್ ನಾಯರ್ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ ಕೆಎಸ್ಎಸ್ ಕಾಲೇಜ್ ಸುಬ್ರಹ್ಮಣ್ಯ ಇವರು ಆಗಮಿಸಿದ್ದರು. ರಾತ್ರಿ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

ನ.9ರಂದು ಬೆಳಿಗ್ಗೆ 6ರಿಂದ ಬಿಪಿ6 ವ್ಯಾಯಾಮ, ತದನಂತರ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಯಶವಂತ ರೈ ನಿವೃತ್ತ ಮುಖ್ಯ ಶಿಕ್ಷಕರು, ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆ ಸುಬ್ರಹ್ಮಣ್ಯ,ಧರ್ಮ ಗುರುಗಳಾದ ಫಾದರ್ ಹನ್ರೀ ಜೋಸೆಫ್ ನೆಟ್ಟಣ, ಕುರಾನ್ ಪಠಣಕ್ಕೆ ಮಹಮ್ಮದ್ ಜಾಕೀರ್ ಸಾಹೇಬ್ ಆಗಮಿಸಿ ತಮ್ಮ ಧರ್ಮಗಳ ಬಗ್ಗೆ ವಿವರಣೆಯನ್ನು ನೀಡಿದರು. ನಂತರ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಬೆಳಗಿನ ಉಪಹಾರದ ನಂತರ ಗೈಡ್ಸ್ ವಿಭಾಗಕ್ಕೆ ಸಾಹಸಮಯ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಸ್ಕೌಟ್ ವಿಭಾಗಕ್ಕೆ ಗೂಡು ದೀಪ ತಯಾರಿ, ಗಾಳಿಪಟ ತಯಾರಿ ಹೊರ ಸಂಚಾರ, ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಊಟದ ನಂತರ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಾಧವ ಬಿ. ಕೆ ಅಧ್ಯಕ್ಷರು, ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ವಹಿಸಿದರು. ಪ್ರೊಫೆಸರ್ ರಂಗಯ್ಯ ಶೆಟ್ಟಿಗಾರ್, ವಿಶ್ರಾಂತ ಪ್ರಾಂಶುಪಾಲರು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇವರು ಸಮಾರೋಪ ಭಾಷಣ ಮಾಡಿದರು. ಶ್ರೀಮತಿ ಲತಾ ಬಿಟಿ ಐಕ್ಯೂಏಸಿ ಸಂಯೋಜಕರು, ಶ್ರೀಮತಿ ವಿಮಲಾ ರಂಗಯ್ಯ ಜಿಲ್ಲಾ ಗೈಡ್ಸ್ ಆಯುಕ್ತರು, ಡಾ. ದಿನೇಶ ಪಿ.ಟಿ ಪ್ರಾಂಶುಪಾಲರು, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಮನೋಹರ್, ರೋವರ್ ಲೀಡರ್ ರಾಮಪ್ರಸಾದ್ ಹಾಗೂ ರೇಂಜರ್ ಲೀಡರ್ ಶ್ರೀಮತಿ ಅಶ್ವಿನಿ ಎಸ್ ಎನ್, ಅರವಿಂದ ಬಾಳಿಲ, ಸರೋಜಿನಿ ಕರಿಕಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಮಲಾ ರಂಗಯ್ಯ ಸ್ವಾಗತಿಸಿದರು. ಉದಯಕುಮಾರ್ ಬಾಳಿಲ ಪ್ರಧಾನ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಪಂಜ ಇವರು ಧನ್ಯವಾದಗಳು ಸಮರ್ಪಿಸಿದರು. ಸ್ಕೌಟ್ ಶಿಕ್ಷಕಿ ಸುಜಯಶ್ರೀ, ಗೈಡ್ ಶಿಕ್ಷಕಿ ಶುಭ ಕಾರ್ಯಕ್ರಮ ನಿರೂಪಿಸಿದರು. ಧ್ವಜ ಅವರೋಹಣದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಕೆ ಎಸ್ ಎಸ್ ಕಾಲೇಜಿನ ರೋವರ್ ರೇಂಜರ್ ವಿದ್ಯಾರ್ಥಿಗಳು ಸಾಹಸಮಯ ಪಯೋನಿಯರಿಂಗ್ ಪ್ರಾಜೆಕ್ಟ್ ರಚನೆಯ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಕಾಲೇಜಿನ ಎನ್ಎಸ್ಎಸ್ ಮತ್ತು ರೆಡ್ ಕ್ರಾಸ್ ಘಟಕವು ಸ್ವಯಂ ಸೇವೆಯಲ್ಲಿ ಸಹಕರಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!