Ad Widget

ಒಕ್ಕಲಿಗ ಗೌಡ ಸೇವಾ ವಾಹಿನಿ ಲೋಕಾರ್ಪಣೆ ಹಾಗೂ ಕೆಂಪುಕಲ್ಲು ಹಸ್ತಾಂತರ ಕಾರ್ಯಕ್ರಮ

. . . . . . .

ಯುವ ಮನಸ್ಸುಗಳು ಒಂದಾಗಿ ಸಮಾಜದ ಸೇವೆಗೆ ಇಳಿದಿರುವುದು ಒಳ್ಳೆಯ ವಿಚಾರ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ – ಡಾ.‌ ಧರ್ಮಪಾಲನಾಥ ಸ್ವಾಮೀಜಿ

ಸಂಘಟನೆ ಸಮಾಜಕ್ಕೆ ದೊಡ್ಡ ಆಸ್ತಿಯಾಗಲಿ – ಕೃಷ್ಣಪ್ರಸಾದ್ ಮಡ್ತಿಲ

ಒಕ್ಕಲಿಗ ಗೌಡ ಸಮಾಜದ ಸೇವಾ ಚಟುವಟಿಕೆ ಹಿನ್ನೆಲೆಯಲ್ಲಿ ಒಕ್ಕಲಿಗ ಗೌಡ ಸೇವಾ ವಾಹಿನಿ (ರಿ) ದ.ಕ. ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು ಇದರ ಲೋಕಾರ್ಪಣೆ ಕಾರ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪೂಜ್ಯ ಡಾ|ಧರ್ಮಪಾಲನಾಥ ಸ್ವಾಮೀಜಿ’ಯವರು ಹಾಗೂ ಊರವರು ಪುಂಡಿಪಣವು’ಗೆ ನಾಣ್ಯ ಹಾಕಿ(ದೇಣಿಗೆ ನೀಡಿ) ಸೇವಾವಾಹಿನಿ’ಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಈ ವೇಳೆ ಗುಡ್ಡೆ ಕುಸಿತದಿಂದ ಮನೆಗೆ ತೊಂದರೆಗೊಳಗಾಗಿದ್ದ ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ನ ತೀರ್ಥರಾಮ ಗೌಡ ಪಾಂಬಾರು ಇವರ ಮನೆ ನಿರ್ಮಾಣಕ್ಕೆ ಒಕ್ಕಲಿಗ ಗೌಡ ಸೇವಾ ವಾಹಿನಿ ವತಿಯಿಂದ 2500 ಕೆಂಪು ಕಲ್ಲುಗಳನ್ನು ಫಲಾನುಭವಿ ತೀರ್ಥರಾಮರಿಗೆ ತೆಂಗಿನಗಿಡ ನೀಡುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮ ನೇರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಡಾ| ಧರ್ಮಪಾಲನಾಥ ಸ್ವಾಮೀಜಿ ಒಕ್ಕಲಿಗ ಸಮಾಜದ ಯುವ ಮನಸ್ಸುಗಳು ಒಂದಾಗಿ ಸೇವಾ ಚಟುವಟಿಕೆ ಪ್ರಾರಂಭಿಸಿರುವುದು ಒಳ್ಳೆಯ ವಿಚಾರವಾಗಿದ್ದು ಕಟ್ಟ ಕಡೆಯ ವ್ಯಕ್ತಿಗೆ ಎಲ್ಲಾ ವಿಧದಲ್ಲಿ ಸ್ಪಂದಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ ರಾಜಕೀಯ ರಹಿತವಾಗಿ ಈ ಒಂದು ಸಂಘಟನೆಯನ್ನು ಮುಂದುವರಿಸಿದ್ದಲ್ಲಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬಹುದು ಎಂದರು.

ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷರಾದ ಪುನೀತ್ ಮಾಡತ್ತಾರು ಮಾತನಾಡಿ ಇಂತಹ ಒಂದು ಪರಿಕಲ್ಪನೆ ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿರುವುದು ನಮಗೆಲ್ಲ ಆದರ್ಶಪ್ರಾಯವಾದುದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯರಾದ ಬೋಜಪ್ಪಗೌಡ ಮಾಡತ್ತಾರು ಮತ್ತು  ಕಿಶೋರ್ ಪುಣಚ ವೇದಿಕೆಯಲ್ಲಿ ಉಪಸ್ಥಿತರಿದ್ದು, ಜಯರಾಮ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.
ಅಲಂಗಾರು, ಪುಣಚ ಹಾಗೂ ಮಾಡತ್ತಡ್ಕ ಗ್ರಾಮಸ್ಥರು ಈ ಒಂದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!