
ಅಗಲಿದ ಸಾಮಾಜಿಕ ಕಾರ್ಯಕರ್ತರುಗಳಾದ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ನಿರ್ದೇಶಕ ದಿ.ಮಾಧವ ಗೌಡ ಸುಳ್ಳಿ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಸದಸ್ಯ ದಿ. ರಾಮಚಂದ್ರ ಪ್ರಭು ಕುಂಟಿಹಿತ್ತು ಸ್ಮರಣಾರ್ಥ ಅವರ ಅಭಿಮಾನಿಗಳು ದಾನಿಗಳ ಸಹಕಾರದೊಂದಿಗೆ ನಾರ್ಣಕಜೆಯಲ್ಲಿ ಸುಮಾರು 85 ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ಇಂದು ನೆರವೇರಿತು.
ಊರ ಹಿರಿಯರಾದ ವೇಣುಗೋಪಾಲ ನಾರ್ಣಕಜೆ ಉದ್ಘಾಟನೆ ನೆರವೇರಿಸಿದರು. ನೂತನ ಗ್ರಾಮ ಪಂಚಾಯತ್ ಸದಸ್ಯ ಯಜ್ಞೇಶ್ವರ ನಾರ್ಣಕಜೆ ಅಧ್ಯಕ್ಷತೆ ವಹಿಸಿದ್ದರು. ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯ ವೇಣುಗೋಪಾಲ ಪುನ್ಕುಟ್ಟಿ ಪತ್ರಕರ್ತ ದುರ್ಗಾಕುಮಾರ್ ನಾರ್ಯಕೆರೆ, ರಾಧಾಕೃಷ್ಣ ನಾಯಕ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಎಲಿಮಲೆ ಅಕ್ಷಯ ಸ್ಟೀಲ್ & ಹಾರ್ಡ್ ವೇರ್ ಮಾಲಕ ಹೇಮನಾಥ ಕೋಡುಗುಳಿ ಸ್ವಾಗತಿಸಿ, ಯೋಗರಾಜ್ ಬಾಚಿನಡ್ಕ ವಂದಿಸಿದರು. ನೆಲ್ಲೂರು ಕೆಮ್ರಾಜೆ ಸೊಸೈಟಿ ಸಿಇಓ ಸಂತೋಷ್ ನಾರ್ಣಕಜೆ ನಿರೂಪಿಸಿದರು.
