
ಶಾರದಾ ಕುಟುಂಬ ವಿಕಸನ ಮಂಡಳಿ ಪುತ್ತೂರು ಮತ್ತು ಸುಳ್ಯ ಘಟಕ ಹಾಗೂ ಮಾತೃ ಸಮನ್ವಯ ಸಮಿತಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಸಬಲೀಕರಣ ಮತ್ತು ರಕ್ಷಾನಿಧಿ ಕಾರ್ಯಯಾನದ ಅಂಗವಾಗಿ ಬೆಳ್ಳಾರೆ ಗ್ರಾಮ ವಿಭಾಗೀಯ ದೀಪ ಪ್ರಜ್ವಲನೆ ಕಾರ್ಯಕ್ರಮ ಬೆಳ್ಳಾರೆಯ ಅಜಪಿಲ ದೇವಸ್ಥಾನ ಸಭಾಭವನದಲ್ಲಿ ಇಂದು ನಡೆಯಿತು.
ಅಜಪಿಲ ಕ್ಷೇತ್ರದ ಅರ್ಚಕರಾದ ಉದಯ ಕುಮಾರ್ ಭಟ್ ಕೆ. ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶಾರದಾ ಕುಟುಂಬ ವಿಕಸನ ಮಂಡಳಿಯ ಸುಳ್ಯ ತಾಲೂಕು ಹಾಗೂ ಬೆಳ್ಳಾರೆ ವಿಭಾಗೀಯ ಕಾರ್ಯ ನಿರ್ದೇಶಕರಾದ ಶ್ರೀಮತಿ ಅನುರಾಧ.ಕೆ, ಶ್ರೀಮತಿ ಧನ್ಯತಾ. ಟಿ, ಶ್ರೀಮತಿ ರೂಪಶ್ರೀ ಹಾಗೂ ಮಾತೃ ಸಮನ್ವಯ ಸಮಿತಿ ಸದಸ್ಯರಾದ ಶ್ರೀಮತಿ ಪ್ರಿಯಾ, ಶ್ರೀಮತಿ ರಾಧಿಕಾ, ಶ್ರೀಮತಿ ಲೀಲಾವತಿ.ಕೆ ಹಾಗೂ ಕಲ್ಮಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ರೈ ಎಣ್ಮೂರು, ಶಾ.ಕು.ವಿ. ಮಂಡಳಿಯ ಸಾಂಸ್ಕೃತಿಕ ವಿಭಾಗ ನಿರ್ದೇಶಕರಾದ ಸುಧೀರ್ ಎಮ್. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಅನುರಾಧ ಇವರು ಶಾರದಾ ಕುಟುಂಬ ಮಂಡಳಿಯ ಕಾರ್ಯಯಾನದ ಯೋಜನಾ ವರದಿ ಮಂಡಿಸಿದರು.
ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ನಂತರ ವಿದ್ಯಾರ್ಥಿ ಪ್ರತಿಭಾ ಸದಸ್ಯರಿಂದ ನೃತ್ಯ ರೂಪಕ ಪ್ರದರ್ಶನ ನಡೆಯಿತು. ಮಾತೃ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು .
