ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ ಸುವಿಚಾರ ಸಾಹಿತ್ಯ ಸಂಘ ಮತ್ತು ರಾಮನ್ ಇಕೋ ಕ್ಲಬ್ ವತಿಯಿಂದ ಸಾಹಿತ್ಯ ಸಂವಾದ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ಅಜಿತ್ ಐವರ್ನಾಡು ಕೆಎಸ್ ಗೌಡ ವಿದ್ಯಾಸಂಸ್ಥೆಯ ಅಧ್ಯಾಪಕರು, ದೈವ ಮಧ್ಯಸ್ಥರೂ ಆಗಿರುವ ಇವರು ಜಾನಪದ ಸಾಹಿತ್ಯ ಕುರಿತಾಗಿ ಮಾತನಾಡುತ್ತಾ ತಲೆತಲಾಂತರದಿಂದ ಮೌಕಿಕ ಪರಂಪರೆಯ ಮೂಲಕ ಹರಿದು ಬಂದ ಅದೆಷ್ಟೋ ನಂಬಿಕೆಗಳು ಆಚರಣೆಗಳು ನಮ್ಮ ಬದುಕಿಗೆ ಪ್ರೇರಕವಾಗಿವೆ. ವಿದ್ಯಾರ್ಥಿಗಳು ಹಿರಿಯರಿಂದ ಬಂದ ಮನೆಯ ಆಚಾರ ವಿಚಾರಗಳನ್ನು ಅವರಿಂದ ಕಲಿತು ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು .ಶ್ರೀಮತಿ ಬೇಬಿ ಸಿ ಸಿ. ನಿವೃತ್ತ ಆರೋಗ್ಯ ಸುರಕ್ಷಾಧಿಕಾರಿ ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ಇಂದಿನ ಕಾಲಘಟ್ಟದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ದೈಹಿಕ ಆರೋಗ್ಯ ಜೊತೆಗೆ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಬೇಕು ಎಂದು ಹೇಳಿದರು. ಶಾಲಾ ಸಂಚಾಲಕರಾದ ಪಿಜಿಎಸ್ ಎನ್ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಯಶೋಧರ. ಎನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿತ್ಯಶ್ರೀ, ಆಶಿಕಾ , ಛಾಯಾ ಆರಂಭ ಗೀತೆ ಹಾಡಿದರು .10ನೇ ತರಗತಿಯ ವಿದ್ಯಾರ್ಥಿಗಳಾದ ಜಸ್ವಿತಾ ಮತ್ತು ವಾಣಿಶ್ರೀ ಕಾರ್ಯಕ್ರಮದ ನಿರ್ವಹಣೆ ಮಾಡಿದರು.10ನೇ ತರಗತಿಯ ವಿದ್ಯಾರ್ಥಿನಿ ಕ್ಷಮಾ ವಂದಿಸಿದರು.
- Thursday
- November 21st, 2024