ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನ.15 ಶುಕ್ರವಾರದಂದು ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆಯ ಪ್ರಯುಕ್ತ ಶ್ರೀ ದೇವಳದ ಪ್ರಾಂಗಣದಲ್ಲಿ ಗೋಪೂಜೆ ನಡೆಯಿತು. ಕುಲ್ಕುಂದ ಪರಿಸರದ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದ ಗೋವುಗಳಿಗೆ ಬಸವೇಶ್ವರ ದೇವಸ್ಥಾನದ ಪುರೋಹಿತರಾದ ಗಣೇಶ್ ದೀಕ್ಷಿತ್ ರವರು ಗೋಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಗಿರಿಧರ ಸ್ಕಂದ, ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ, ಕಾರ್ಯದರ್ಶಿ ಚಂದ್ರಶೇಖರ ಬಸವನಮೂಲೆ, ಶಿವರಾಮ ಪಳ್ಳಿಗದ್ದೆ, ಗುಡ್ಡಪ್ಪ ಬೀಡಿನಗದ್ದೆ, ರಾಜೇಶ್ ಕುಲ್ಕುಂದ, ಶೋಭಾ ಗಿರಿಧರ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ಸುಮಾರು 400 ವರ್ಷಗಳ ಇತಿಹಾಸವಿರುವ ಕುಲ್ಕುಂದ ಜಾನುವಾರು ಜಾತ್ರೆಯು ಪ್ರತೀವರ್ಷ ಕಾರ್ತಿಕ ಹುಣ್ಣಿಮೆಯ ದಿನದಂದು ಕುಲ್ಕುಂದ ಮಜಲಿನಲ್ಲಿ ಸುಮಾರು 15 ದಿನಗಳ ಕಾಲ ಸಂಪ್ರದಾಯಬದ್ಧವಾಗಿ ವೈಭವದಿಂದ ನಡೆಯುತ್ತಿತ್ತು. ಆದರೆ ಹಲವು ವರ್ಷಗಳ ಹಿಂದೆ ಮಾರಾಟ ಹಾಗೂ ಖರೀದಿ ವಿಚಾರದಲ್ಲಿ ಸಂಘರ್ಷ ಏರ್ಪಟ್ಟು ವಿವಾದ ನಡೆದು ಜಾನುವಾರು ಜಾತ್ರೆ ರದ್ದುಗೊಂಡು ಕುಲ್ಕುಂದ ಮಜಲಿನ ಬದಲಾಗಿ ಪ್ರತೀವರ್ಷ ಪಕ್ಕದ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯುತ್ತಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Thursday
- November 21st, 2024