

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿನ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಫೋಟೋ ಸ್ಪರ್ಧೆಯನ್ನು ನಡೆಸಲಾಯಿತು. ಸ್ಕೌಟ್ಸ್ ಗೈಡ್ಸ್ ವಿಭಾಗದ 21 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 9Aನೇ ತರಗತಿಯ ಕೃತಿಕಾ ರೈ ಪ್ರಥಮ, 10ನೇ ತರಗತಿಯ ಮಾನ್ಯ ಎನ್.ಎಸ್ ದ್ವಿತೀಯ ಮತ್ತು 9Bನೇ ತರಗತಿಯ ಅಬಿರಾ ತೃತೀಯ ಬಹುಮಾನ ಪಡೆಡುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ನೀಡಲಾಯಿತು. ಕಾರ್ಯಕ್ರಮವನ್ನು ಸ್ಕೌಟ್ಸ್ ಮಾಸ್ಟರ್ ಲಿಂಗಪ್ಪ ಬೆಳ್ಳಾರೆ ಸಂಘಟಿಸಿದ್ದರು. ತೀರ್ಪುಗಾರರಾಗಿ ಶ್ರೀಮತಿ ಸುಮಿತ್ರಾ ಕೆ ಶ್ರೀಮತಿ ಕವಿತಾ ಡಿ ಎಂ ಶ್ರೀಮತಿ ದಿವ್ಯಾ ಎಂ.ಕೆ ಮತ್ತು ಶ್ರೀಮತಿ ಗುಣಶ್ರೀ ಸಹಕರಿಸಿದರು.