ಸಾಮಾನ್ಯ ಬಡವರ ಬದುಕನ್ನು ಕಸಿದುಕೊಳ್ಳುವ ಕಸ್ತೂರಿ ರಂಗನ್ ವರದಿ ಅನುಷ್ಠಾನವದ ಹಿನ್ಬೆಲೆಯಲ್ಲಿ ಮಲೆನಾಡು ಹಿತಕಕ್ಷಣಾ ವೇದಿಕೆಯ ಮೂಲಕ ನಡೆಯುವ ರಾಜಕೀಯ ರಹಿತ ಹೋರಾಟಕ್ಕೆ ಸುಳ್ಯ ಬಿಜೆಪಿ ಬೆಂಬಲ ನೀಡಲಿದೆ. ಯಾವುದೇ ಸರಕಾರವಿರಲಿ ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದು. ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಬಡವರನ್ನು ಬೀದಿಗೆ ತಳ್ಳುವ ಕಾರ್ಯ ಆಗಬಾರದು. ಇದನ್ನು ಕೈಬಿಟ್ಟು ತಕ್ಷಣ ರಾಜ್ಯಸರಕಾರ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ನ.15 ರಂದು ಗುಂಡ್ಯದಲ್ಲಿ ನಡೆಯಲಿರುವ ರೈತ ಪರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ, ಈ ಹೋರಾಟದ ಯಶಸ್ವಿಗೆ ಎಲ್ಲಾ ಕೃಷಿಕ ಬಂಧುಗಳು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Thursday
- November 14th, 2024